-->
NEWS:  27ರಂದು ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ, ವೈದ್ಯಕೀಯ ತಪಾಸಣೆ - Details

NEWS: 27ರಂದು ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ, ವೈದ್ಯಕೀಯ ತಪಾಸಣೆ - Details

 

 ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಜೂನ್ 27ರಂದು ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ಹಾಗೂ ಉಚಿತ ಆಯುರ್ವೇದ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.

ಬೆಳಗ್ಗೆ 9.30  ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಹಿಮ್ಮೇಳದ "ವೃತ್ತಿ- ಹವ್ಯಾಸಿ- ವಿದ್ಯಾರ್ಥಿಗಳಿಗಾಗಿ"  ಶಿಬಿರ  ಏರ್ಪಡಿಸಲಾಗಿದೆ. ಮಧ್ಯಾಹ್ನದ ಅನಂತರ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಇದೆ.  ಇಂದಿನ ದಿನಗಳಲ್ಲಿ ಹಿಮ್ಮೇಳದ ಶಿಬಿರ ಅತೀ ಅಗತ್ಯವಾದಕಾರಣ ಎಲ್ಲರೂ ಭಾಗವಹಿಸಬೇಕಾಗಿ  ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಸಿರಿಬಾಗಿಲು ವಿನಂತಿಸಿದ್ದಾರೆ.

ಕೀರ್ತಿಶೇಷ ನೆಡ್ಲೆ ನರಸಿಂಹ ಭಟ್ ಸ್ಮರಣೆಯೊಂದಿಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಯಕ್ಷಗಾನ ಹಿಮ್ಮೇಳ ಗುರುಗಳೂ ಹಿರಿಯ ಮದ್ದಳೆಗಾರರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹರಿನಾರಾಯಣ ಬೈಪಡಿತ್ತಾಯ ಹಾಗೂ ಪದ್ಯಾಣ ಶಂಕರನಾರಾಯಣ ಭಟ್ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಡಿ.ಶ್ಯಾಮ ಭಟ್ ಭಾಗವಹಿಸುವರು. ಪಾತ್ರ ಪ್ರಸ್ತುತಿಯಲ್ಲಿ ಔಚಿತ್ಯಪ್ರಜ್ಞೆ, ಪ್ರಸಂಗ ಸಾಹಿತ್ಯದ ಪ್ರಸ್ತುತಿ ಮತ್ತು ಮದ್ದಳೆ ಸಹಯೋಗ, ಮೇಳವೆಂಬ ಸಮೂಹ ವ್ಯವಸ್ಥೆಯೊಂದಿಗೆ ವೈಯಕ್ತಿಕ ಹೊಂದಾಣಿಕೆ, ಪ್ರಸಂಗ ಸಾಹಿತ್ಯ ಪ್ರಸ್ತುತಿಯಲ್ಲಿ ಛಂದಸ್ಸಿನ ಮಹತ್ವ, ಧ್ವನಿವರ್ಧಕ ಸಮರ್ಪಕ ಬಳಕೆ, ವ್ಯಕ್ತಿ ಪಾತ್ರವಾಗುವ ಪ್ರಕ್ರಿಯೆ, ಪ್ರಸಂಗಗಳ ಸಾಂಪ್ರದಾಯಿಕ ನಡೆ, ಕಲಾವಿದನ ಸಾಮಾಜಿಕ, ಸಾಂಸ್ಕೃತಿಕ ಜವಾಬ್ದಾರಿ, ಮದ್ದಲೆಗಾರರ ಸ್ಥಾನ, ಹೊಂದಾಣಿಕೆ ವಿಷಯಗಳ ಕುರಿತು ಅವಲೋಕನ, ಸಮಾಲೋಚನೆ ನಿರ್ಣಯವಿರಲಿದೆ.

ಸುಬ್ರಾಯ ಸಂಪಾಜೆ, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಎಸ್.ಎನ್.ಭಟ್ ಬಾಯಾರು, ಡಾ. ಪುರುಷೋತ್ತಮ ಭಟ್ ನಿಡುವಜೆ ನಿರ್ವಹಿಸುವರು.

ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಕೊಂಕಣಾಜೆ ಚಂದ್ರಶೇಖರ ಭಟ್, ಅಂಡಾಲ ದೇವಿಪ್ರಸಾದ ಶೆಟ್ಟಿ, ಕಡತೋಕ ಗೋಪಾಲಕೃಷ್ಣ ಭಾಗವತ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಬಲಿಪ ಶಿವಶಂಕರ ಭಟ್, ರಮೇಶ್ ಭಟ್ ಪುತ್ತೂರು, ಸತ್ಯನಾರಾಯಣ ಪುಣ್ಚಿತ್ತಾಯ, ಲಕ್ಷ್ಮೀನಾರಾಯಣ ರಾವ್ ಅಡೂರು, ಡಾ. ಸತೀಶ್ ಪುಣ್ಚಿತ್ತಾಯ, ಕೃಷ್ಣಪ್ರಕಾಶ್ ಉಳಿತ್ತಾಯ, ಮುರಾರಿ ಕಡಂಬಳಿತ್ತಾಯ, ಪ್ರಶಾಂತ್ ಶೆಟ್ಟಿ ವಗೆನಾಡು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

 

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ