
UDUPI NEWS: ಉಡುಪಿಯಲ್ಲಿ ATL ಶಿಕ್ಷಕರಿಗೆ ಶೆಲ್ ಎನ್ಎಕ್ಸ್ಪ್ಲೋರರ್ಸ್ (NXplorers) ತರಬೇತಿ
ಎಟಿಎಲ್
ಶಾಲಾ ಶಿಕ್ಷಣದಲ್ಲಿ
ಸುಸ್ಥಿರತೆ, ಹೊಸತನ ಮತ್ತು ಚಿಂತನಶಕ್ತಿಯನ್ನು ಒಗ್ಗೂಡಿಸಲು ಶೆಲ್ ಎನ್ ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮದಡಿ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉಡುಪಿಯಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕಾಗಿ
ನಡೆಸಲಾಯಿತು.
ಲರ್ನಿಂಗ್
ಲಿಂಕ್ಸ್ ಫೌಂಡೇಶನ್ ಮತ್ತು ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,
ಶಿಕ್ಷಕರಿಗೆ ವಿದ್ಯಾರ್ಥಿಗಳನ್ನುಸ್ಟೆಮ್ ಆಧಾರಿತ ಯೋಜನೆಗಳ ಮೂಲಕ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು, ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ.
ಈ
ವರ್ಷ ನಡೆದ ತರಬೇತಿಯಲ್ಲಿ ಉಡುಪಿಯ 16 ಎಟಿಎಲ್ ಶಾಲೆಗಳಿಂದ 18 ಶಿಕ್ಷಕರು ಭಾಗವಹಿಸಿದ್ದರು. ಈ ಶಿಕ್ಷಕರಲ್ಲಿ ಹಲವರು
ಕಳೆದ ಎರಡು ವರ್ಷಗಳಿಂದ ಎನ್‌ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮದ ಭಾಗವಾಗಿದ್ದು, ಈಗಾಗಲೇ ಉತ್ತಮ ಅನುಭವ ಹೊಂದಿದ್ದಾರೆ. ತರಬೇತಿಯಲ್ಲಿ ಎನ್‌ಎಕ್ಸ್‌ಪ್ಲೋರರ್ಸ್ ಫೌಂಡೇಶನ್ ಪಠ್ಯಕ್ರಮದ ಸಂಪೂರ್ಣ ಪರಿಚಯ ನೀಡಲಾಯಿತು.
ಇದರ ಮೂಲಕ ಶಿಕ್ಷಕರು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ನಾಯಕರಾಗಿ ರೂಪಿಸಿ, ನೈಜ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡುವ ಜ್ಞಾನ ಹಾಗೂ ಕೌಶಲ್ಯಗಳನ್ನು ಗಳಿಸಿದರು.
ಕಾರ್ಯಕ್ರಮಕ್ಕೆ
ಉಡುಪಿಯ ಡಯಟ್ ಪ್ರಾಂಶುಪಾಲರಾದ ಅಶೋಕ ಕಾಮತ್ ಹಾಗೂ ಉಪನ್ಯಾಸಕರಾದ ಸುರೇಶ್ ಭಟ್ ಅವರು ಉಪಸ್ಥಿತರಿದ್ದು, ಈ ತರಬೇತಿಯು ರಾಷ್ಟ್ರೀಯ
ಶಿಕ್ಷಣ ಉದ್ದೇಶಗಳೊಂದಿಗೆ ಹೊಂದಿಕೆಯಾಗಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
2023 ರಿಂದ ಉಡುಪಿಯಲ್ಲಿ ನಡೆಯುತ್ತಿರುವ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮದ ಮೂಲಕ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರೂಪವಾದ ಕೆಲವು ವಿದ್ಯಾರ್ಥಿ ಯೋಜನೆಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಈ ಯಶಸ್ಸುಗಳಿಗೆ ನೀತಿ ಆಯೋಗ, ಸ್ಥಳೀಯ ಶಿಕ್ಷಣ ಇಲಾಖೆ ಮತ್ತು ಶಾಲಾ ಆಡಳಿತ ಮಂಡಳಿಗಳ ಸತತ ಸಹಕಾರ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಹೊಸತನವನ್ನು ಅಳವಡಿಸಿ ಆ ಮೂಲಕ ವಿದ್ಯಾರ್ಥಿಗಳು ಹೊಸದಾಗಿ ಯೋಚಿಸುವುದು,, ಸೃಜನಾತ್ಮಕವಾಗಿರುವುದು ಮತ್ತು ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ. ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಗಟ್ಟಿಯಾದ ಹಾದಿಯನ್ನು ಕಲ್ಪಿಸುತ್ತಿದೆ.
Empowering Teachers for a Sustainable Future –
Shell NXplorers Training for ATL Teachers in Udupi