-->
Mangalore: ಸಕ್ಷಮ ದ.ಕ.ಜಿಲ್ಲಾ ಘಟಕದಿಂದ ಶ್ರೀ ಸಾಯಿನಿಕೇತನ ಸೇವಾಶ್ರಮ ಭೇಟಿ, ನೆರವು ಹಸ್ತಾಂತರ

Mangalore: ಸಕ್ಷಮ ದ.ಕ.ಜಿಲ್ಲಾ ಘಟಕದಿಂದ ಶ್ರೀ ಸಾಯಿನಿಕೇತನ ಸೇವಾಶ್ರಮ ಭೇಟಿ, ನೆರವು ಹಸ್ತಾಂತರ

ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾಬಂಧನದ ಹಿನ್ನೆಲೆಯಲ್ಲಿ ಸಕ್ಷಮ ದ.ಕ.ಜಿಲ್ಲಾ ಘಟಕ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿತು.

ಸಕ್ಷಮ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ಟ ಕಾಕುಂಜೆ ಜೊತೆಯಲ್ಲಿ, ಕಾರ್ಯದರ್ಶಿ ಹರೀಶ್ ಪ್ರಭು, ಸಹಕಾರ್ಯದರ್ಶಿ ಭಾಸ್ಕರ ಹೊಸಮನೆ, ಮಹಿಳಾ ಪ್ರತಿನಿಧಿ ಗೀತಾ ಲಕ್ಷ್ಮೀಶ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ನಾರಾಯಣಮೂರ್ತಿ ಉಪಸ್ಥಿತರಿದ್ದರು.

ಡಾ. ಉದಯ್ ಕುಮಾರ್ ನೂಜಿ ಹಾಗೂ ಡಾ. ಶಾರದಾ ದಂಪತಿಗಳ ಕನಸಿನ ಕೂಸಾದ ಶ್ರೀ ಸಾಯಿ ನಿಕೇತನ ಸೇವಾಶ್ರಮವು ಶ್ರೀ ಸಾಯಿ ಸೇವಾ ಪ್ರತಿಷ್ಠಾನಮ್ ಚಾರಿಟೇಬಲ್  ಟ್ರಸ್ಟ್ ದೈಗೋಳಿ ಅಂಗ ಸಂಸ್ಥೆ. ಈ ಸಂಸ್ಥೆಯು ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದವರಿಗೆ, ಮಾನಸಿಕ ತೊಂದರೆಯಿಂದ ಬಳಲುತ್ತಿರುವವರಿಗೆ ಹಾಗೂ ಅನಾಥರಿಗೆ ಪುನರ್ವಸತಿ ಕೇಂದ್ರವಾಗಿದೆ. ಸುಮಾರು 120 ಫಲಾನುಭವಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಎಲ್ಲರಿಗೂ ಉತ್ತಮ ರೀತಿಯ ವಸತಿ ಸಹಿತ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ.'

ಸಂಸ್ಥೆಯ ಈ ಮಹೋನ್ನತ ಕಾರ್ಯವನ್ನು ಶ್ಲಾಘಿಸಿ ಅವರ ಅಗತ್ಯತೆಗಳನ್ನು ಪರಿಗಣಿಸಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಮಂಗಳೂರಿನ ಪ್ರತಿಷ್ಠಿತ ನಿಟ್ಟೆ ವಿಶ್ವವಿದ್ಯಾಲಯ  ದೇರಳಕಟ್ಟೆ ಶಿಕ್ಷಣ ಸಂಸ್ಥೆ ನೆರವಿನಹಸ್ತ ಚಾಚಿದೆ. ಸಕ್ಷಮದ ವತಿಯಿಂದ 3 ವಾಟರ್ ಬೆಡ್‌ಗಳು ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಯ ವಸತಿನಿಲಯದಿಂದ ಸಂಗ್ರಹಿದ 100ಕ್ಕೂ ಅಧಿಕ ಹಾಸಿಗೆಗಳನ್ನು ಸೇವಾಶ್ರಮಕ್ಕೆ ಉದಾರವಾಗಿ ನೀಡಲಾಯಿತು. ದೇಣಿಗೆಯನ್ನು ಸೇವಾಶ್ರಮದ ಪರವಾಗಿ ಸೈಕೋಲಾಜಿಸ್ಟ್ ರಮ್ಯಾ ಅವರು ಸ್ವೀಕರಿಸಿದರು.

ಹಾಸಿಗೆಯನ್ನು ಸೇವಾಶ್ರಮಕ್ಕೆ ತಲುಪಿಸುವ ಸತ್ಕಾರ್ಯದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ NSS ಅಧಿಕಾರಿಗಳು, ವಸತಿ ಗೃಹದ ವಾರ್ಡನ್, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರಾದ ರವಿ ಮುಖ್ಯ ಭೂಮಿಕೆಯನ್ನು ನಿರ್ವಹಿಸಿದ್ದಾರೆ. ಡಾ. ವರ್ಷ ಹಾಗೂ ಸಮಾಜ ಸೇವಕರಾದ ಅಕ್ಷಿತ್ ಶೆಟ್ಟಿ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ