
Mangalore: ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ಮತ್ತು ಆಟಿಡೊಂಜಿ ಕೂಟ
ಮಂಗಳೂರು: ಮಂಗಳೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ರಕ್ಷಾಬಂಧನ
ಹಾಗೂ ತುಳು ನಾಡಿನ ವಿಶಿಷ್ಟ ಹಬ್ಬ ಆಟಿಡೊಂಜಿ ಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಂಗಳೂರು ಹೋಬಳಿ ಮಾತೃತ್ವಮ್ ಅಧ್ಯಕ್ಷರಾದ ಸುಮಾ ರಮೇಶ್ ಅವರು
ಅಧ್ಯಕ್ಷತೆ ವಹಿಸಿ, ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕೃತಿ, ಭಾರತೀಯತೆ, ಭಾಷೆಯನ್ನು ಉಳಿಸಿಕೊಳ್ಳಬೇಕು
ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂಸೇವಕರೂ ಇನ್ಫೋಸಿಸ್ ಸಂಸ್ಥೆಯ
ಸೀನಿಯರ್ ಮ್ಯಾನೇಜರ್ ಆಗಿರುವ ರವಿರಾಜ್ ಭಟ್ ಉದ್ಘಾಟಿಸಿ ರಕ್ಷಾಬಂಧನದ ಮಹತ್ವವನ್ನು ತಿಳಿಸಿ, ರಾಷ್ಟ್ರೀಯತೆಯನ್ನು
ಜಾಗೃತಗೊಳಿಸಿದರು.
ಶೀ ಭಾರತೀ ಸಮೂಹ ಸಂಸ್ಥೆಯ ನಿರ್ದೇಶಕ ಗಿರೀಶ್ ಎಂ., ಪ್ರಾಂಶುಪಾಲ
ಸಂದೀಪ್ ಆಚಾರ್ಯ ಹಾಗೂ ವಿದ್ಯಾರ್ಥಿ ಸಂಘದ ನಾಯಕ ಭವನ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಮ್ರತಾ ಕಾರ್ಯಕ್ರಮ ನಿರ್ವಹಿಸಿದರು.
10ನೇ ತರಗತಿಯ ವಿದ್ಯಾರ್ಥಿನಿ ಅನನ್ಯಾ ಸ್ವಾಗತಿಸಿದರು. 9ನೇ ತರಗತಿ ವಿದ್ಯಾರ್ಥಿನಿ ತನಿಷ್ಕ ವಂದಿಸಿದರು.
ಬಳಿಕ ಆಟಿಡೊಂಜಿ ಕೂಟ ವಿಶಿಷ್ಟವಾಗಿ ಮೂಡಿ ಬಂತು. ಈ ಸಂದರ್ಭ ಸಂಸ್ಥೆಯ ಕನ್ನಡದ ಅಧ್ಯಾಪಿಕೆಯಾದ ಗಾಯತ್ರಿ
ಶ್ರೀನಿವಾಸ್ ಅವರು ಆಟಿಯ ಮಹತ್ವವನ್ನು ಬಹಳ ಸುಂದರವಾಗಿ ವಿಶ್ಲೇಷಿಸಿದರು. ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು
ಆಟಿಕಳಂಜನ ನೃತ್ಯ ಮಾಡಿ ಪ್ರೇಕ್ಷಕರ ಮನ ಗೆದ್ದರು. ಈ ಸಂದರ್ಭ ಮಂಗಳೂರು ಹವ್ಯಕ ಮಂಡಲದ ಮಾತೆಯರು ಒಟ್ಟು
ಸೇರಿ ತಯಾರಿಸಿ ತಂದಿದ್ದ ಆಟಿಯ ತಿನಿಸನ್ನು ಎಲ್ಲರಿಗೂ
ಹಂಚಿದರು. ಇದರೊಂದಿಗೆ ಶ್ರೀ ಭಾರತೀ ಸಮೂಹ ಸಂಸ್ಥೆಯ ಸಾಂಸ್ಕೃತಿಕ ಸಂಘ ಹಮ್ಮಿಕೊಂಡಂತಹ ಸಾಂಸ್ಕೃತಿಕ
ದಿನದಲ್ಲಿ ವಿದ್ಯಾರ್ಥಿಗಳು ಬೇರೆ ಬೇರೆ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಯನ್ನು ತೊಟ್ಟು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು.