
News: ಸೌದಿ ಅರೇಬಿಯಾ ಜುಬೈಲ್ ನಲ್ಲಿ SAM AL-ASRI COMPANY LIMITED ಮೊದಲ ವಾರ್ಷಿಕ ಸಭೆ
ಸೌದಿ
ಅರೇಬಿಯಾ ಜುಬೈಲ್ ನಲ್ಲಿ SAM AL-ASRI COMPANY LIMITED ಮೊದಲ ವಾರ್ಷಿಕ ಸಭೆ ನಡೆಸಿತು. ಕಂಪನಿಯ
ಬೆಳವಣಿಗೆ, ಹೊಸತನ ಮತ್ತು ಉತ್ಕೃಷ್ಟತೆಗೆ ಸಮರ್ಪಿತವಾದ ಮಹತ್ವದ ಹಂತವಿದು. ಕಾರ್ಯಕ್ರಮವನ್ನು ಕಂಪನಿಯ
ಮಾಲೀಕರು ಮತ್ತು ಸ್ಥಾಪಕರಾದ ಅಬ್ದುಲ್ ಅಝೀಝ್ ನೇತೃತ್ವದಲ್ಲಿ, ಪ್ರಮುಖ ತಂಡದ ಸದಸ್ಯರ ಉಪಸ್ಥಿತಿಯಲ್ಲಿ
ನಡೆಸಲಾಯಿತು.
ಮ್ಯಾನೇಜಿಂಗ್
ಡೈರೆಕ್ಟರ್ ಆತಿಮ್, ಪ್ರಾಜೆಕ್ಟ್ ಮೆನೇಜರ್ ಮೊಹಮ್ಮದ್
ಹನೀಫ್, ಬ್ಯುಸಿನೆಸ್ ಡೆವಲಪ್ ಮೆಂಟ್ ಮೆನೇಜರ್ ಅಶ್ರಫ್ ಬಾವಾ, ಕೋಆರ್ಡಿನೇಟರ್ ಹುಸೈನ್ ಇಸ್ಮಾಯಿಲ್,
ಅಕೌಂಟೆಂಟ್ ಮೊಹಮ್ಮದ್ ನೌಫಲ್, ಮಹಮ್ಮದ್ ಶಫೀಕ್, ಯಾರ್ಡ್ ಇನ್ ಚಾರ್ಜ್ ಶಾಕೀರ್ ಅಹಮದ್, ಅಡ್ಮಿನ್
ಮೊಹಮ್ಮದ್ ಶರೀಫ್ ಹಾಜರಿದ್ದರು. ಸಭೆಯಲ್ಲಿ ಮಾತನಾಡಿದ ಅಬ್ದುಲ್ ಅಝೀಝ್ ಅವರು, ಕಳೆದ ವರ್ಷದ ಸಾಧನೆಗಳ
ಬಗ್ಗೆ ಸಂತೋಷ ವ್ಯಕ್ತಪಡಿಸಿ, ಮುಂದಿನ ವರ್ಷಗಳ ವಿಸ್ತರಣಾ ಯೋಜನೆಗಳನ್ನು ಹಂಚಿಕೊಂಡರು. ತಂಡ, ಗ್ರಾಹಕರು
ಮತ್ತು ಪಾಲುದಾರರಿಗೆ ತಮ್ಮ ನಂಬಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಸಭೆಯ ವೇಳೆಯಲ್ಲಿ
ತಂಡದ ಭವಿಷ್ಯದ ಕಾರ್ಯತಂತ್ರ ಚರ್ಚೆ ಮತ್ತು ಉತ್ತಮ ಸೇವೆ ಒದಗಿಸುವ ಬದ್ಧತೆಯನ್ನು ಮರುಸ್ಥಾಪಿಸುವ
ಕುರಿತ ಕಾರ್ಯಕ್ರಮಗಳು ನಡೆದವು. ಸಭೆ ಹಳೆಯ ಸಾಧನೆಗಳನ್ನು ಆಚರಿಸಿದಷ್ಟೇ ಭವಿಷ್ಯದ ಯಶಸ್ಸಿಗೆ ದಾರಿ
ಬಿಚ್ಚಿತು.