Dakshina Kannada News: ಪದವೀಧರ, ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹಿನ್ನಲೆ 2028 ರಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರ : ಪ್ರಭಾಕರ ಪ್ರಭು
ಮುಂದಿನ 2028ರ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ
ಬಿ. ವೈ . ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರ ಸ್ವಾಮಿ ನೇತೃತ್ವದಲ್ಲಿ ಎನ್.ಡಿ.ಎ.
ನೇತೃತ್ವದ ಪಕ್ಷ ಕನಿಷ್ಠ 140 ಕ್ಕೂ ಹೆಚ್ಚು ಶಾಸಕರ ಸೀಟುಗಳನ್ನು ಪಡೆದುಕೊಂಡು ಮತ್ತೆ ಬಿಜೆಪಿ ಸರಕಾರ
ಆಡಳಿತ ನಡೆಸಲಿದೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದ ಆಡಳಿತ ವಿರೋಧಿ ಮತ್ತು ಜನಪರ ವಿರೋಧಿ ನೀತಿಗಳ ವಿರುದ್ಧವಾಗಿ ಪ್ರಜ್ಞಾವಂತ ಶಿಕ್ಷಕರು ಮತ್ತು ಪದವೀಧರರು ಬ್ಯಾಲೆಟ್ ಪೇಪರ್ ನಲ್ಲಿ ಸಹ ತಮ್ಮ ಹಕ್ಕುಗಳನ್ನು ಪ್ರಾಮಾಣಿಕವಾಗಿ ಚಲಾಯಿಸಿ ರಾಷ್ಟ್ರಿಯ ಚಿಂತನೆಯ ಬಿಜೆಪಿ ಪಕ್ಷದ ಅಧಿಕೃತ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಸಿಜೆಪಿ ಪಕ್ಷದ ನಕಲಿ ವಿದ್ಯಾರ್ಥಿಗಳಿಗೆ ಕರ್ನಾಟಕದ ಮತದಾರರು ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.ಕಾಂಗ್ರೆಸ್ ಸರಕಾರ ಬಂದ ಮೇಲೆ ಗ್ಯಾರಂಟಿ ಒಂದು ನೆಪ ಬಿಟ್ರೆಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಬಿಜೆಪಿ ಸರಕಾರದಲ್ಲಿ ಒಂದು ಎಪಿಎಲ್ ಕಾರ್ಡ್ ದಾರ ಮನೆಯಲ್ಲಿ 65 ವರ್ಷ ದಾಟಿದ ಎರಡು ಮೂರು ಜನ ಇದ್ರೂ ಸಹ ಸಂದ್ಯಾ ಸುರಕ್ಷಾ ಯೋಜನೆಯಲ್ಲಿ ಒಂದು ಕುಟುಂಬಕ್ಕೆ 2400-3800 ವರೆಗೆ ಪಿಂಚಣಿ ಬರುತ್ತಿತ್ತು. ಆದ್ರೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯಲ್ಲಿ ಕೇವಲ ಒಬ್ಬರಿಗೆ ಮಾತ್ರ 2000 ಕೊಟ್ಟು ಕೈ ತೊಳೆದುಕೊಂಡಿದೆ. ಕಾಂಗ್ರೆಸ್ ಸರಕಾರ ಬಂದ ನಂತರ ಬಡವರಿಗೆ ವಾಸ್ತವ್ಯಕ್ಕೆ ಸೂರು ಒದಗಿಸಿಲ್ಲ, ಕುಮ್ಕಿಯಲ್ಲಿ ಮನೆ ಕಟ್ಟಿಕೊಂಡ್ರೆ ಮನೆ ನಂಬರ್, ವಿದ್ಯುತ್ ಸಂಪರ್ಕ ಇಲ್ಲಾ, ಹೀಗೆ ಹಲವಾರು ಜನರಿಗೆ ಗ್ಯಾರಂಟಿ ಯೋಜನೆ ಆಸೆ ತೋರಿಸಿ ಈಗಾಗಲೇ ಬಿಜೆಪಿ ಸರಕಾರದ ಕೆಲವು ಜನಪರ ಯೋಜನೆಗಳನ್ನು ಸ್ಥಗಿತ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ಜನರೊಂದಿಗೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್ ಸರಕಾರವನ್ನು ದೂರವಿಟ್ಟು ಜಗತ್ತಿನಲ್ಲಿಯೇ ಶ್ರೇಷ್ಠ ವ್ಯಕ್ತಿಯಾಗಿ ಹೊರ ಹೊಮ್ಮಿರುವ ಬಿಜೆಪಿ ನೇತೃತ್ವದ ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಯವರ ಪರವಾಗಿ ಕರ್ನಾಟಕದ ಜನತೆ ಮತ್ತೊಮ್ಮೆ ಕೈ ಜೋಡಿಸಿ 2028 ವಿಧಾನ ಸಭೆಯಲ್ಲಿ ಬಿ. ವೈ.ವಿಜಯೇಂದ್ರ ಹಾಗೂ ಹೆಚ್ ಡಿ ಕುಮಾರ ಸ್ವಾಮಿ ನೇತೃತ್ವದ ಎನ್ ಡಿ ಎ ಸರಕಾರ ಬರುವಂತೆ ರಾಜ್ಯದ ಪ್ರಜ್ಞಾವಂತ ಮತದಾರರಲ್ಲಿ ಪ್ರಭಾಕರ ಪ್ರಭು ವಿನಂತಿಸಿದ್ದಾರೆ