BANTWAL ಕರಾವಳಿ ಕಲೋತ್ಸವಕ್ಕೆ ಅದ್ದೂರಿಯ ಜಾನಪದ ದಿಬ್ಬಣ
Friday, April 29, 2022
ಬಂಟ್ವಾಳ: ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏ.29ರ ಶುಕ್ರವಾರದಿಂದ ಮೇ .29ರವರೆಗೆ ಒಂದು ತಿಂಗಳ ಕಾಲ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವದ ಜಾನಪದ ದಿಬ್ಬಣಕ್ಕೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಚೆಂಡೆ ನುಡಿಸುವ ಮೂಲಕ ಶುಕ್ರವಾರ ಸಂಜೆ ಚಾಲನೆ ನೀಡಿದರು.
ಈ ಸಂದರ್ಭ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಸ್ಥಾಪಕ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಚಿಣ್ಣರ ಅಧ್ಯಕ್ಷೆ ಜನ್ಯಪ್ರಸಾದ್, ಸ್ವಾಗತ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಬಿ.ಶೆಟ್ಟಿ ಶ್ರೀಶೈಲ, ಪದಾಧಿಕಾರಿಗಳಾದ ತೀರ್ಥಪ್ರಸಾದ್ ಅನಂತಾಡಿ, ಮಹಮ್ಮದ್ ನಂದಾವರ, ಶೈಲಜಾ ರಾಜೇಶ್, ದೇವಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಗೊಂಬೆ ಕುಣಿತ, ಚೆಂಡೆ ವಾದನ, ನೃತ್ಯ ಪ್ರಾಕಾರಗಳು, ಕೀಲುಕುಣಿತವೇ ಮೊದಲಾದ ಆಕರ್ಷಣೆಗಳು ಮೆರವಣಿಗೆಯಲ್ಲಿ ಕಂಡುಬಂದವು.