MOODUBIDIRE ಮೂಡುಬಿದಿರೆ ಸಾವಿರ ಕಂಬ ಬಸದಿಗೆ ಸಿಎಂ ಭೇಟಿ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರನ್ನು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ಮಠದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಿ ಹರಸಿ ಆಶೀರ್ವಾದ ಮಾಡಿದರು.
ಜೈನ ಕಾಶಿ ಮೂಡು ಬಿದಿರೆ ಯ ಬಸದಿ ಹಾಗೂ ಶ್ರೀ ಮಠ ಜೀರ್ಣೋದ್ದಾರ ಕ್ಕೆ ಈಗಾಗಲೆ ರೂಪಾಯಿ ಐದು ಕೋಟಿ ಅನುದಾನ ಕ್ಕೆ ಬೇಡಿಕೆ ಇಟ್ಟಿದ್ದು ಶೀಘ್ರ ಹಣ ಬಿಡು ಗಡೆ ಯಾಗಲಿ ಅಂತಾರಾಷ್ಟ್ರೀಯ ಜೈನ ಪುರಾತತತ್ವ ವಸ್ತು ಸಂಗ್ರಹಾ ಲಯ ಕ್ಕೆ ರಮಾ ರಾಣಿ ಶೋದ ಸಂಸ್ಥಾನ ಕ್ಕೆ ಸೂಕ್ತ ಅನುದಾನ ಸಿಗಲಿಎಂದುವಿವಿಧ ಬೇಡಿಕೆಗಳ ಯೋಜನಾ ಪತ್ರ ಮುಖ್ಯ ಮಂತ್ರಿ ಗಳಿಗೆ ನೀಡಿ ಹರಸಿ ದರು
ಮುಖ್ಯ ಮಂತ್ರಿ ಗಳು ಭಗವಾನ್ ಪಾರ್ಶ್ವ ನಾಥ ಸ್ವಾಮಿ ದರ್ಶನ ಮಾಡಿ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುದಾಗಿ ಭರವಸೆ ಇತ್ತರು ಬಳಿಕ ಸಾವಿರ ಕಂಬ ಬಸದಿಗೆ ಸ್ವಾಮೀಜಿ ಹಾಗೂ ಗಣ್ಯ ರೊಂದಿಗೆ ಬೇಟಿ ನೀಡಿ ದರ್ಶನ ಪಡೆದರು ಡಾ ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿ ದರು ಸೌಮ್ಯ ಶ್ರೀ ವಂದಿಸಿದರು
ಇಂಧನ ಸಚಿವ ಸುನೀಲ್ ಕುಮಾರ್,ಸಂಸದ ನಳಿನ್ ಕುಮಾರ್ ಮಟ್ಟಾರು ರತ್ನಾಕರ್ ಹೆಗ್ಡೆ, ಕೃಷ್ಣರಾಜ್ ಹೆಗ್ಡೆ, ಉಡುಪಿ ರಘು ಪತಿ ಭಟ್, ಮೂಡು ಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್ ಬಸದಿ ಮುಕ್ತೇಸರ ರಾದ ಪಟ್ಣ ಶೆಟ್ಟಿ ಸುದೇಶ್, ದಿನೇಶ್, ಆದರ್ಶ್, ಬಾಹುಬಲಿ ಪ್ರಸಾದ್, ಪೂರ್ಣ ಚಂದ್ರ ಕೆ.ಪಿ ಜಗದೀಶ್ ಅಧಿಕಾರಿ ಪುರಸಭೆ ಅಧ್ಯಕ್ಷ ಪ್ರಸಾದ್, ಇಂದೂ ಮುಖ್ಯಧಿಕಾರಿ, ಶ್ವೇತಾ ವಕೀಲರು ಜಯರಾಜ್ ಕಾಂಬ್ಳಿ ನೇಮಿರಾಜ್, ವಕೀಲ್ ಶಾಂತಿ ಪ್ರಸಾದ್, ಪದ್ಮ ಪ್ರಸಾದ್ ಉಪಸ್ಥಿತರಿದ್ದರು