MOVIE ತೋತಾಪುರಿ ಟ್ರೇಲರ್ ಔಟ್, ನೀರುದೋಸೆ ಬಳಿಕ ಜಗ್ಗೇಶ್ ಮತ್ತೊಂದು ವಿಭಿನ್ನ ಚಿತ್ರ
Friday, April 22, 2022
ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮಗಳ ಕ್ಯಾರೆಕ್ಟರ್ ಗಳು ಇರುವ, ಜಗ್ಗೇಶ್ ಅವರ ಕಚಗುಳಿ ಇಡುವ ಸಂಭಾಷಣೆಯೊಂದಿಗೆ ಬಹುನಿರೀಕ್ಷಿತ ತೋತಾಪುರಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.
https://www.youtube.com/watch?v=VH1nutPoxPw
ಎಂದಿನಂತೆಯೇ ಜಗ್ಗೇಶ್ ನಗಿಸುವುದರೊಂದಿಗೆ ಹೊಸ ಕತೆಯೊಂದನ್ನು ಪ್ರಸ್ತುತಪಡಿಸುವಂತಿದ್ದರೆ, ವಿಜಯ ಪ್ರಸಾದ್ ಅವರ ಶೈಲಿಯ ಸಂಭಾಷಣೆ ವಿವಿಧ ಅರ್ಥಗಳನ್ನು ಧ್ವನಿಸುತ್ತಿದೆ. ಜಾತಿ, ಧರ್ಮಗಳ ವ್ಯಾಖ್ಯಾನವನ್ನು ಹೇಳುವ ಈ ಟ್ರೇಲರ್ ಇದೀಗ ಸಖತ್ ಟ್ರೆಂಡಿಂಗ್ ಆಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಿನಿಮಾದತ್ತ ಎಲ್ಲರ ಕುತೂಹಲ ನೆಟ್ಟಿದೆ.
ಜಗ್ಗೇಶ್ ದತ್ತಣ್ಣ ಕಾಂಬಿನೇಶನ್ ನ ಅಬಿನಯವಿದ್ದ ನೀರುದೋಸೆ ಚಿತ್ರ ಇಂಥದ್ದೇ ಒಂದು ಕಾನ್ಸೆಫ್ಟ್ ನೊಂದಿಗೆ ಗಮನ ಸೆಳೆದಿತ್ತು. ಇದೀಗ ತೋತಾಪುರಿ, ಜಾತಿ, ಧರ್ಮದ ಎಲ್ಲೆ ಮೀರಿ ಮಾನವತ್ವದ ಸಂದೇಶ ನೀಡಹೊರಟಿದೆ.