
HEALTH: ರಾಜ್ಯದಲ್ಲಿ ಕೊರೊನಾ: 24 ಗಂಟೆಯಲ್ಲಿ 112 ಮಂದಿಗೆ ಪಾಸಿಟಿವ್
Monday, May 9, 2022
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೀಗಿದೆ. ಕಳೆದ 24 ಗಂಟೆಯಲ್ಲಿ 112 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,948,747ಕ್ಕೆ ಏರಿಕೆಯಾಗಿದೆ. ಓರ್ವ ಮೃತಪಟ್ಟಿದ್ದಾನೆ. ಸಾವಿನ ಸಂಖ್ಯೆ 40,062 ಇದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು 92 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,906,679ಕ್ಕೆ ಏರಿಕೆಯಾಗಿದೆ. ಇನ್ನು 1,964 ಸಕ್ರಿಯ ಪ್ರಕರಣಗಳಿವೆ.