CRIME: ಆರ್ಕೆಸ್ಟ್ರಾ ಗಾಯಕಿಗೆ ಹಾಡು ಹೇಳಲು ಕರೆಸಿ ಗ್ಯಾಂಗ್ ರೇಪ್: ಮೂವರ ಬಂಧನ
Monday, May 9, 2022
ಬಿಹಾರ ಪಾಟ್ನಾದ ಕೃಷ್ಣನಗರ ಪ್ರದೇಶದಲ್ಲಿ 28 ವರ್ಷದ ಗಾಯಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ.
ಸಂತ್ರಸ್ತೆಯು ಜಹಾನಾಬಾದ್ ಜಿಲ್ಲೆಯ ನಿವಾಸಿಯಾಗಿದ್ದು, ಮದುವೆ, ಜನ್ಮದಿನಾಚರಣೆ ಸೇರಿದಂತೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಗಾಯನ ಗೋಷ್ಠಿಗಳನ್ನು ನಡೆಸಿಕೊಡುತ್ತಿದ್ದರು. ಆರೋಪಿಗಳಾದ ಪಿಂಟು ಕುಮಾರ್, ಸಂಜೀವ್ ಕುಮಾರ್ ಹಾಗೂ ಕರು ಕುಮಾರ್ ಮದುವೆ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳಿಕೊಂಡಿದ್ದರು ಅವರು ಹೇಳಿದ ಸ್ಥಳಕ್ಕೆ ತೆರಳಿದಾಗ ಆಘಾತವಾಯಿತು. ಅಲ್ಲಿ ಅಂಥ ಯಾವುದೇ ಸಮಾರಂಭ ಇರಲಿಲ್ಲ. ಈ ಕುರಿತು ವಿಚಾರಿಸಿದಾಗ ನನ್ನನ್ನು ಕೊಠಡಿಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ’ಎಂದು ಸಂತ್ರಸ್ತೆ ಹೇಳಿದ್ದಾರೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಮತ್ತೊಂದು ಕೊಠಡಿಗೆ ತೆರಳಿ ಲಾಕ್ ಮಾಡಿಕೊಂಡೆ. ಕೂಡಲೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.