WORLD: ಒಂದು ದಂಪತಿ, ಒಂಭತ್ತು ಮಕ್ಕಳು..ವೈರಲ್ ಆದ ವಿಷಯ
Monday, May 9, 2022
ದಂಪತಿಗೆ ಒಂಭತ್ತು ಮಕ್ಕಳು ಜನಿಸಿದ್ದಾರೆ ಎಂಬ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್. ನಿಜಕ್ಕೂ ನಡೆದದ್ದೇನು ಎಂಬುದರ ಕುರಿತು ಫ್ಯಾಕ್ಟ್ ಚೆಕ್ ಮಾಡಲಾಗುತ್ತಿದ್ದರೆ, ಸದ್ಯಕ್ಕೆ ಆಫ್ರಿಕಾದ ಮಾಲಿ ದೇಶದ ದಂಪತಿಗೆ ನವಶಿಶುಗಳ ಜನನವಾಗಿರುವುದು ಸುದ್ದಿ. 2021ರ ಮೇ.4 ರಂದು ಈ ಮಕ್ಕಳು ಅವಧಿಗೂ ಮುನ್ನವೇ ಜನಿಸಿದ್ದವು. ಏಳು ತಿಂಗಳು ತುಂಬುವುದಕ್ಕೂ ಮೊದಲೇ ಇವರ ತಾಯಿ ಈ 9 ಮಕ್ಕಳಿಗೆ ಜನ್ಮ ನೀಡಿದ್ದರು. ಈ ಒಂಭತ್ತು ಮಕ್ಕಳಲ್ಲಿ ಐವರು ಹೆಣ್ಣು ಮಕ್ಕಳು ಹಾಗೂ ನಾಲ್ವರು ಗಂಡು ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿದೆ.