RAIN: ಕರಾವಳಿಯಾದ್ಯಂತ ಭಾರೀ ಮಳೆ
Monday, May 16, 2022
ಚಂಡಮಾರುತದ ಪ್ರಭಾವದಿಂದ ಕರಾವಳಿಯಾದ್ಯಂತ ಭಾರಿ ಮಳೆಯಾಗುತ್ತಿದೆ.
ಶಾಲಾರಂಭದ ದಿನವಾದ ಮೇ 16ರಂದೇ ಮಕ್ಕಳಿಗೆ ಮಳೆಯ ಸಿಂಚನ. ದ.ಕ.ಜಿಲ್ಲೆ ಸಹಿತ ಕರಾವಳಿಯಾದ್ಯಂತ ಮಧ್ಯಾಹ್ನದ ಬಳಿಕ ಉತ್ತಮ ಮಳೆ.ಕೃತಕ ನೆರೆಯಿಂದ ಕೆಸರುಮಿಶ್ರಿತ ನೀರಿನಿಂದ ಆವೃತವಾದರೆ, ರಸ್ತೆಯಂಚಿನಲ್ಲಿ ನಿಲ್ಲಲೂ ಆಗದ ಸ್ಥಿತಿ ನಿರ್ಮಾಣಗೊಂಡಿತು. ಇದರಿಂದ ಶಾಲೆ ಬಿಟ್ಟು ಮನೆಗೆ ತೆರಳುವ ಮಕ್ಕಳು ಪರದಾಟ ಅನುಭವಿಸಬೇಕಾಯಿತು.ಚರಂಡಿಗಳು ಸಂಪೂರ್ಣ ಹೂಳೆತ್ತದ ಕಾರಣ ಸಮಸ್ಯೆ ಅನುಭವಿಸಬೇಕಾಯಿತು. ಅದೇ ರೀತಿ ಹಲವು ವಸತಿ ಬಡಾವಣೆಗಳಲ್ಲೂ ಚರಂಡಿ ಹೂಳೆತ್ತದ ಪರಿಣಾಮ ರಸ್ತೆಯಲ್ಲಿಡೀ ನೀರು ಹರಿದಿದೆ.