Relegion: ಮಿತ್ತಬೈಲ್ ಮಸೀದಿಯಲ್ಲಿ ಮೇ 21ರಂದು ಮಖಾಂ ಉರೂಸ್
ಬಿ.ಸಿ.ರೋಡಿನ ಮಿತ್ತಬೈಲ್ ನಲ್ಲಿ ಇತಿಹಾಸ ಪ್ರಸಿದ್ಧ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಝ್ರತ್ ಶೈಖ್ ವಲಿಯುಲ್ಲಾಹಿ (ಖ.ಸಿ.) ಹೆಸರಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಖಾಂ ಉರೂಸ್ ಮೇ 21ರಂದು ನಡೆಯಲಿದೆ.
ಈ ವಿಷಯವನ್ನು ಉರೂಸ್ ಸಮಿತಿ ಅಧ್ಯಕ್ಷ ಹಾಮದ್ ಬಾವ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಸ್ತ ಕೇರಳ ಜಮೀಯತುಲ್ ಉಲಮಾ ಅಧ್ಯಕ್ಷರು ಹಾಗೂ ಮಿತ್ತಬೈಲ್ ಖಾಝಿ ಸಯ್ಯದುಲ್ ಉಲಮಾ ಅಸ್ಸೈಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೇ 14ರಿಂದ 21ರವರೆಗೆ ಧಾರ್ಮಿಕ ಪ್ರಭಾಷಣ ನಡೆಯಲಿದೆ ಎಂದರು.
ಮೇ.14 ರಂದು ರಾತ್ರಿ 8.30 ಕ್ಕೆ ಸಮಸ್ತ ಕೇರಳ ಜಂಇಯ್ಯುತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಶೈಖುಲ್ ಜಾಮಿ:ಆ ಅಲಿಕುಟ್ಟಿ ಉಸ್ತಾದ್ ಉದ್ಘಾಟಿಸಲಿದ್ದಾರೆ, 21ರ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ,ರಾಜಕೀಯ,ಧಾರ್ಮಿಕ,ಸಾಮಾಜಿ
ಸುದ್ದಿಗೋಷ್ಠಿಯಲ್ಲಿ ಮಿತ್ತಬೈಲ್ ಎಂಜೆಎಂ ಅಧ್ಯಕ್ಷ ಮಹಮ್ಮದ್ ಸಾಗರ್, ವಿವಿಧ ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ಸಲಾಂ,ಮಹಮ್ಮದ್ ಮಜಲ್, ಮಹಮ್ಮದ್ ಆಲಿ, ಅಬ್ದುಲ್ ರಹಿಮಾನ್, ಜಮಾಲುದ್ದೀನ್ ಶಾಂತಿಯಂಗಡಿ ಉಪಸ್ಥಿತರಿದ್ದರು.