AGNIPATH: ಮಿಲಿಟರಿಗೆ ಸೇರ್ತೀರಾ? ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬ ಪ್ರಮಾಣಪತ್ರ ತನ್ನಿ

AGNIPATH: ಮಿಲಿಟರಿಗೆ ಸೇರ್ತೀರಾ? ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬ ಪ್ರಮಾಣಪತ್ರ ತನ್ನಿ

 

ದೆಹಲಿಯಲ್ಲಿ ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಮಿಲಿಟರಿ ಪಡೆಗೆ ಸೇರಲಿಚ್ಛಿಸುವ ಯುವಕರು ತಾವು ಪ್ರತಿಭಟನೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಶೇಕಡಾ 100ರಷ್ಟು ಪೊಲೀಸ್ ಪರಿಶೀಲನೆಯೊಂದಿಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ ಎಂದಿದ್ದಾರೆ. 

ಭಾರತೀಯ ಸೇನೆಯ ಅಡಿಪಾಯ ಶಿಸ್ತು. ಬೆಂಕಿ ಹಚ್ಚುವುದು, ವಿಧ್ವಂಸಕ ಕೃತ್ಯಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ. ಪೊಲೀಸ್ ಪ್ರಮಾಣಪತ್ರ ನೂರಕ್ಕೆ ನೂರು ಸರಿಯಾಗಿರುತ್ತದೆ. ಪ್ರಮಾಣಪತ್ರ ಇಲ್ಲದಿದ್ದರೆ ಸೇನೆ ಸೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.

4 ವರ್ಷಗಳ ನಂತರ ಅಗ್ನಿವೀರರಿಗೆ ಅವಕಾಶಗಳೇನು?

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಮ್ಮೆ ಸೇನೆಗೆ ಸೇರಿದರೆ ಅವರನ್ನು ಸೈನಿಕ ಎಂದೇ ಕರೆಯುತ್ತಾರೆ. ಹೀಗಾಗಿ ಅವರಿಗೆ ಶೇ.25 ರಷ್ಟು ಜನರಿಗೆ ಮತ್ತಷ್ಟು ಉದ್ಯೋಗ ನೀಡುತ್ತೇವೆ. ಉಳಿದ ಶೇ. 75 ರಷ್ಟು ಜನರು ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಾರೆ, ಅವರು ಅನೇಕ ಸ್ಥಳಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ ಎಂದರು.

ಪುರಿ ಏನಂದರು ಇಲ್ಲಿದೆ ವಿವರ:

ಅಗ್ನಿಪಥ್ ಯೋಜನೆ ದೀರ್ಘಕಾಲದಿಂದ ಬಾಕಿಯಿರುವ ಸುಧಾರಿತ ಯೋಜನೆ ಈ ಅಗ್ನಿಪಥ್‌ ಯೋಜನೆ ಏಕಾಏಕಿ ಜಾರಿಗೊಳಿಸಿಲ್ಲ. 1989ರಿಂದಲೂ ಅಗ್ನಿಪಥ್‌ ಯೋಜನೆ ಜಾರಿ ಕುರಿತು ಚರ್ಚೆ ನಡೆಸಲಾಗ್ತಿದೆ. ಯೋಜನೆಯ ಕುರಿತು ಹಲವು ಚರ್ಚೆ ನಡೆಸಿ ಜಾರಿಗೆ ತರಲಾಗಿದೆ ಎಂದರು.ಅಗ್ನಿವೀರರಿಗೆ ಶೇ.10ರಷ್ಟು ಮೀಸಲಾತಿ, ನೇಮಕಾತಿ ವೇಳೆ ಹಳ್ಳಿಗಳಲ್ಲಿರುವ ಯುವಕರಿಗೆ ಶೇ.70ರಷ್ಟು ಮೀಸಲಾತಿ, ಅಗ್ನಿವೀರರಿಗೆ 1 ಕೋಟಿಯ ವಿಮೆ, ಅಗ್ನಿವೀರರಿಗೆ ಹೆಚ್ಚಿನ ಭತ್ಯೆ ನೀಡಲು ಕ್ರಮ ಕೈಗೊಳ್ಳಲಾಗುವುದು, ಮೊದಲ ಬ್ಯಾಚ್‌ ಅಗ್ನಿವೀರರ ವಯೋಮಿತಿ 5 ವರ್ಷ ಹೆಚ್ಚಳ, ಇದೇ 24ರಂದು ಅಧಿಸೂಚನೆ ಪ್ರಕಟ, ಜುಲೈ 24ಕ್ಕೆ ಮೊದಲ ಹಂತದ ನೇಮಕಾತಿ ಪರೀಕ್ಷೆ ನಡೆಯಲಿದೆ ಎಂದರು.,

ಯುವತಿಯರಿಗೂ ಅರ್ಜಿ ಸಲ್ಲಿಸಲು ಅವಕಾಶ,  ಡಿಸೆಂಬರ್‌ ಆರಂಭದಲ್ಲಿ ಮೊದಲ ಬ್ಯಾಚ್‌ನ ಅಗ್ನಿವೀರರ ನೇಮಕ, ಭೂಸೇನೆಗೆ ಮೊದ ಬ್ಯಾಚ್‌ನಲ್ಲಿ 25,000 ಅಗ್ನಿವೀರರ ನೇಮಕ, ಸೇನೆಪಡೆಗಳಲ್ಲಿ ಶಿಸ್ತಿಗೆ ಮೊದಲ ಅಧ್ಯತೆ. ಕೇಂದ್ರ ರಕ್ಷಣಾ ಸಚಿವಾಲಯ ತಂದಿರುವ ಭಾರತೀಯ ಮಿಲಿಟರಿಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ದೇಶದ ಭದ್ರತೆ ದೃಷ್ಟಿಯಿಂದ ಈ ಯೋಜನೆ ಮುಖ್ಯವಾಗಿದೆ ಎಂದಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ. ಅದರ ಟ್ವಿಟ್ಟರ್ ಲಿಂಕ್ ಇಲ್ಲಿದೆ.


 

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ