ಕಾಸರಗೋಡು: ಮಂಗಳೂರಿನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶರತ್ ಎಂಬಾತನ
ಮೃತದೇಹ ಮುಂಜುಂಗಾವು ಎಂಬಲ್ಲಿ ಕೊಳದಲ್ಲಿ ಪತ್ತೆಯಾಗಿದೆ.
ಸೂರಂಬೈಲು ನಿವಾಸಿ
ಗೋಪಾಲ, ವಸಂತಿ ದಂಪತಿಯ ಪುತ್ರನಾದ ಈತನ ಚಪ್ಪಲಿ, ಮೊಬೈಲ್ ಕೊಳದ ಬಳಿ ಕಂಡು ಬಂದ ಹಿನ್ನೆಲೆಯಲ್ಲಿ
ಸ್ಥಳೀಯರ ಮಾಹಿತಿ ಮೇರೆಗೆ ಉಪ್ಪಳ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತಿದರು.