COVID UPDATES: ಕೊರೊನಾ ಹೆಚ್ಚಳ: ಮತ್ತೆ ಮಾಸ್ಕ್ ಕಡ್ಡಾಯ
Saturday, June 4, 2022
ದೇಶದ ಹಲವೆಡೆ ಮತ್ತೆ ಕೊರೊನಾ ಕಾಣಿಸಿಕೊಂಡಿದ್ದು, ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವಂತೆಯೇ ಅಲ್ಲಿ ಮಾಸ್ಕ್ ಕಡ್ಡಾಯ ಎಂಬುದನ್ನು ಮರುಘೋಷಿಸಲಾಗಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ ದಿನವೊಂದಕ್ಕೆ 400ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಗಮನಾರ್ಹ ಅಂಶವೆಂದರೆ, ಮಹಾರಾಷ್ಟ್ರ, ಕೇರಳ, ದೆಹಲಿ, ನಾಗಾಲಾಂಡ್ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸುತ್ತಿವೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 1,134 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾದವು, 763 ಮುಂಬೈನಲ್ಲಿ ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ವಿಮಾನ ಹಾಗೂ ಏರ್‌ಪೋರ್ಟ್‌ಗಳಲ್ಲಿ ನಿಯಮಪಾಲನೆ ಕಟ್ಟು ನಿಟ್ಟು ಮಾಡಲಾಗಿದೆ.
ಶನಿವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಪ್ರಕಟಣೆಯಂತೆ ಕಳೆದ 24 ತಾಸುಗಳಲ್ಲಿ ಹೊಸದಾಗಿ 3,962 ಮಂದಿಗೆ ಸೋಂಕು ತಗಲಿದೆ. ಪಾಸಿಟಿವಿಟಿ ರೇಟ್ 0.89 ಆಗಿದೆ.