
MOVIE: ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪ್ರಥ್ವೀರಾಜ್ ತೆರೆಗೆ: ಉತ್ತರ ಪ್ರದೇಶದಲ್ಲಿ ಟ್ಯಾಕ್ಸ್ ಫ್ರೀ
Saturday, June 4, 2022
ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪ್ರಥ್ವೀರಾಜ್ ಜೂನ್ 3ರಂದು ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ತೆರೆ ಕಂಡಿದೆ. 300 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವುದಾಗಿ ಹೇಳಲಾಗಿರುವ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 10.71 ಕೋಟಿ ರೂ ಆಗಿದೆ. ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್, ಮಾನವ್ ವಿಜ್, ಸಂಜಯ್ ದತ್, ಆಲಿ ಫಜಲ್, ನಿಕಿತಾ ಛಡ್ಡಾ ಮತ್ತಿತರರು ನಟಿಸಿರುವ ಈ ಸಿನಿಮಾ ನಿರ್ದೇಶಕರು ಡಾ.ಚಂದ್ರಪ್ರಕಾಶ್ ದ್ವಿವೇದಿ.
ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿನಿಮಾ ನೋಡಿ ಖುಷಿಪಟ್ಟು ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇತಿಹಾಸದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎನ್ನುವ ಕಾರಣದಿಂದ ನಾವು ಇದಕ್ಕೆ ತೆರಿಗೆ ವಿನಾಯತಿ ಘೋಷಿಸಿದ್ದೇವೆ ಎಂದಿದ್ದಾರೆ ಯೋಗಿ.