NEWS ಸತತ ಮೂರನೇ ದಿನ ರಾಹುಲ್ ವಿಚಾರಣೆ, 23ಕ್ಕೆ ಸೋನಿಯಾ ಗಾಂಧಿಗೆ ಹಾಜರಾಗಲು ಸೂಚನೆ
ನವದೆಹಲಿ:
ನ್ಯಾಶನಲ್ ಹೆರಾಲ್ಡ್ ಕೇಸ್ ಗೆ ಸಂಬಂಧಿಸಿದಂತೆ ಸತತ ಮೂರನೇ ದಿನವೂ ಇಡಿ ಕಾಂಗ್ರೆಸ್ ನ ಸಂಸದ ರಾಹುಲ್
ಗಾಂಧಿ ವಿಚಾರಣೆ ನಡೆಸಿದೆ. ಯಂಗ್ ಇಂಡಿಯಾ ಪ್ರೈ. ಲಿಮಿಟೆಡ್ ಸ್ವಾಮ್ಯದ ಎಸೋಸಿಯೇಟೆಡ್ ಜರ್ನಲ್ಸ್
ಲಿಮಿಟೆಡ್ ಪ್ರಕಾಶಿತ ನ್ಯಾಶನಲ್ ಹೆರಾಲ್ಡ್ ಪತ್ರಿಕೆ ವಿಚಾರಕ್ಕೆ ಸಂಬಂಧಿಸಿ ಆರ್ಥಿಕ ವ್ಯವಹಾರಗಳ
ಕುರಿತು ಈ ವಿಚಾರಣೆ ನಡೆಯುತ್ತಿದೆ.ಇದೊಂದು ರಾಜಕೀಯ ಪ್ರೇರಿತ ವಿಚಾರಣೆ ಎಂದು ಆಪಾದಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ಮುಂದುವರಿಸಿವೆ. ಕೇವಲ ವಿಚಾರಣೆಗೆ ಹಾಜರಾಗಲು ಕರೆದರೆ ಪ್ರತಿಭಟನೆ ನಡೆಸುವುದೇಕೆ ಎಂದು ಬಿಜೆಪಿ ಕಾಂಗ್ರೆಸ್ ಅನ್ನು ಛೇಡಿಸಿದರೆ, ತಮ್ಮ ಪಕ್ಷದವರನ್ನಷ್ಟೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಜಾರಿ ನಿರ್ದೇಶನಾಲಯದ
ಮುಂದೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಸಂಸದ ರಾಹುಲ್ ಗಾಂಧಿ ಸತತ ಮೂರನೇ ದಿನವೂ ಹಾಜರಾಗಿದ್ದಾರೆ. ಇಡಿ ಪ್ರಶ್ನಾವಳಿಯನ್ನು ಅವರ ಮುಂದಿಟ್ಟಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 23ಕ್ಕೆ ಸೋನಿಯಾ ಗಾಂಧಿ ಅವರನ್ನು ಹಾಜರಾಗಲು ಇಡಿ ಈಗಾಗಲೇ ನೋಟಿಸ್ ನೀಡಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸೋನಿಯಾ ಆಸ್ಪತ್ರೆಯಲ್ಲಿದ್ದಾರೆ.