POLITICS: ಕಾಂಗ್ರೆಸ್ – ಬಿಜೆಪಿ TALK WAR
Wednesday, June 15, 2022
ಈ ವರ್ಷ ರಾಜಕೀಯ ಪಕ್ಷಗಳು ಸೈದ್ಧಾಂತಿಕವಾಗಿ, ವಿಚಾರ ವಿನಿಮಯ ಮಾಡುವ ತತ್ವಗಳಿಗೆ ತಿಲಾಂಜಲಿ ಇಟ್ಟಿದೆಯೇ? ಇತ್ತೀಚಿನ ಬೆಳವಣಿಗೆಯನ್ನು ನೋಡುತ್ತಿರುವಾಗ ಹಾಗನ್ನಿಸುತ್ತದೆ ಎನ್ನುತ್ತಾರೆ ವಿಶ್ಲೇಷಕರು. ದೃಶ್ಯ ಮಾಧ್ಯಮಗಳ ಮೈಕ್ ಗಳು, ಪ್ರಶ್ನೆಗಳಿಗೆ ಘಟಾನುಘಟಿ ನಾಯಕರು ಎನಿಸಿಕೊಂಡವರೆಲ್ಲಾ ತೀರಾ ವೈಯಕ್ತಿಕ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಕೆಲ ತಿಂಗಳುಗಳಿಂದ ಸಚಿವ ಅಶ್ವತ್ಥನಾರಾಯಣ ಮತ್ತು ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ನಡುವೆ ಹೇಳಿಕೆ ಸಮರ ಸದ್ದು ಮಾಡುತ್ತಿತ್ತು. ಇದೀಗ ಅದು ತಾರಕಕ್ಕೇರಿದೆ. ಕೇವಲ ಈ ರಾಜಕೀಯ ನಾಯಕರಷ್ಟೇ ಅಲ್ಲ, ದೇಶದ ಹಲವೆಡೆ ಕಮೆಂಟ್ ಗಳು ವಿಪರೀತಕ್ಕೆ ಎಡೆ ಮಾಡುತ್ತಿವೆ. ರಾಹುಲ್, ಸೋನಿಯಾಗೆ ಇಡಿ ಸಮನ್ಸ್ ನೀಡಿರುವುದನ್ನು ರಾಜಕೀಯವಾಗಿ ತೆಗೆದುಕೊಂಡ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆಯನ್ನು ಮಾಡುತ್ತಿವೆ. ಅವುಗಳನ್ನು ಸಮರ್ಥಿಸುವ ಹಾಗೂ ವಿರೋಧಿಸುವ ಭರದಲ್ಲಿ ರಾಜ್ಯ ನಾಯಕರೂ ಮಾತಿನ ಸಮರ ಆರಂಭಿಸಿದ್ದಾರೆ.
ಇ.ಡಿ. ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದ ಬೆನ್ನಿಗೆ ಕಾಂಗ್ರೆಸ್ ದೇಶದ ಇ.ಡಿ. ಕಚೇರಿ ಎದುರು ಬೀದಿಗಿಳಿದು ಹೋರಾಟ ನಡೆಸಲು ಆರಂಭಿಸಿದ್ದು ಗೊತ್ತೇ ಇದೆ. ಇದೇ ಹೊತ್ತಿಗೆ ಮಾಧ್ಯಮಗಳ ಮೈಕ್ ಗೆ ಕೈ, ಕಮಲದ ನಾಯಕರು ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ.
ಇನ್ನು ಪ್ರಧಾನಮಂತ್ರಿ ವಿರುದ್ಧವೇ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ಭಾರಿ ಸದ್ದು ಮಾಡಿದೆ. ವಿರೋಧಿಗಳಿಗೆ ಇ.ಡಿ.ಯನ್ನು ಬಿಟ್ಟು ಆಡಳಿತ ಪಕ್ಷ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯೊಳಗೆ ಪೊಲೀಸ್ ಪ್ರವೇಶಿಸಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ರಾಹುಲ್ ವಿಚಾರಣೆ ದೊಡ್ಡ ಸದ್ದು ಮಾಡಿತು.