News: ಮಗನ ಶವ ಪಡೆಯಲು 50 ಸಾವಿರ ಬೇಡಿಕೆ, ಭಿಕ್ಷೆ ಬೇಡಿದ ತಂದೆ, ತಾಯಿ
Thursday, June 9, 2022
ಮಗನ ಶವ ಪಡೆಯಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ 50 ಸಾವಿರ ರೂ ಲಂಚ ಕೇಳಿದ್ದಕ್ಕೆ ತಂದೆ ಮಹೇಶ್ ಠಾಕುರ್ ಭಿಕ್ಷೆ ಬೇಡುವ ವಿಡಿಯೋ ವೈರಲ್ ಆಗಿದೆ. ಸಮಷ್ಟಿಪುರದಲ್ಲಿ ಮರಣೋತ್ತರ ವಿಭಾಗದ ಸಿಬ್ಬಂದಿ ನಾಗೇಂದ್ರ ಮಲ್ಲಿಕ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದೀಗ ಸುದ್ದಿಮಾಧ್ಯಮಗಳಲ್ಲಿ ವಿಡಿಯೋ ಶೇರ್ ಆಗತೊಡಗುತ್ತಿದ್ದಂತೆಯೇ ಬಿಹಾರ ಆರೋಗ್ಯ ಮಂತ್ರಿ ತನಿಖೆಗೆ ಸೂಚಿಸಿದ್ದಾರೆ.
ಬಿಹಾರದ ದಂಪತಿಗಳು ತಮ್ಮ ಮಗನ ಶವವನ್ನು ಪಡೆದುಕೊಳ್ಳಲು ಸರ್ಕಾರಿ ಆಸ್ಪತ್ರೆಗೆ 50,000 ರೂ. ಲಂಚ ನೀಡಬೇಕಾಗಿತ್ತು. ಆದ ಕಾರಣ ತಂದೆ ತಾಯಿ ಭಿಕ್ಷೆ ಬೇಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಆರೋಪವನ್ನು ತಳ್ಳಿ ಹಾಕಿರುವ ಆಸ್ಪತ್ರೆ ಸಿಬ್ಬಂದಿ ಹಣ ಕೇಳಿಲ್ಲ ಎಂದು ಹೇಳಿದ್ದಾರೆ. ವೀಡಿಯೊ ವೈರಲ್ ಆದ ಕೆಲವೇ ದಿನಗಳಲ್ಲಿ, ಸಮಸ್ತಿಪುರ್ ಸದರ್ ಆಸ್ಪತ್ರೆಯ ಆಡಳಿತ, ಭದ್ರತಾ ಸಿಬ್ಬಂದಿ ಜೊತೆಗೆ ಶವವನ್ನು ಮಹೇಶ್ ಠಾಕೂರ್ ಅವರ ಮನೆಗೆ ಕಳುಹಿಸಿತು.