NEWS: ಹಿಂಸಾಚಾರ, ಗಲಭೆ: ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸದ್ದು
ಪ್ರವಾದಿ ಕುರಿತು ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ, ಆಸ್ತಿ ಹಾನಿ ಸಹಿತ ಭೀತಿ ಹುಟ್ಟಿಸುವ ಕೃತ್ಯಗಳಿಗೆ ಕಾರಣವಾಗಿರುವ ಆರೋಪಿಗಳ ವಿರುದ್ಧ ಕಾರ್ಯಾಚರಣೆಯನ್ನು ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿದ್ದು, ಇದೀಗ ಪ್ರಯಾಗ್ ರಾಜ್ ಹಿಂಸಾಚಾರದ ಸೂತ್ರಧಾರ ಎಂಬ ಆರೋಪ ಹೊತ್ತ ಜಾವೇದ್ ಅಹಮದ್ ವಿರುದ್ಧ ಯೋಗಿ ಆದಿತ್ಯಾನಾಥ್ ಸರ್ಕಾರ ತನ್ನ ಬುಲ್ಡೋಜರ್ ಕ್ರಮ ಆರಂಭಿಸಿದೆ.
ನೂರಾರು ಪೊಲೀಸರ ಭದ್ರತೆಯಲ್ಲಿ ಪ್ರಯಾಗ್ ರಾಜ್ ಪ್ರಾಧಿಕಾರವು ಅಹ್ಮದ್ ಅವರ ಮನೆ ಕೆಡವುವುದಕ್ಕೆ ಸಂಬಂಧಿಸಿದ ನೋಟಿಸ್ ಅಂಟಿಸಿತ್ತು. ಮನೆಯನ್ನು 'ಅಕ್ರಮವಾಗಿ ನಿರ್ಮಿಸಲಾಗಿದೆ'. , ಬೆಳಗ್ಗೆ 11ರ ಒಳಗೆ ಮನೆ ಖಾಲಿ ಮಾಡಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು.
ಬಂಗಾಲದಲ್ಲಿ ರೈಲಿಗೆ ಹಾನಿ:
ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಉದ್ರಿಕ್ತ ಗುಂಪೊಂದು ಭಾನುವಾರ ಪಶ್ಚಿಮ ಬಂಗಾಳದಲ್ಲಿ ರೈಲೊಂದರ ಮೇಲೆ ದಾಳಿ ನಡೆಸಿದೆ. ಬೆಥುವಹರಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ರೈಲೊಂದರ ಮೇಲೆ ದಾಳಿ ನಡೆಸಿ, ಹಾನಿಯುಂಟು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.