NEWS: ಇ.ಡಿ.ಯಿಂದ ರಾಹುಲ್ ವಿಚಾರಣೆ, ಹೊರಗೆ ಕಚೇರಿಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ

NEWS: ಇ.ಡಿ.ಯಿಂದ ರಾಹುಲ್ ವಿಚಾರಣೆ, ಹೊರಗೆ ಕಚೇರಿಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ

 

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ವಿಚಾರಣೆ ನಡೆಸಿತು. ಇದೊಂದು ಸೇಡಿನ ಕ್ರವಾಗಿದ್ದು, ರಾಜಕೀಯ ಜಿದ್ದು ಇದರಲ್ಲಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನ ಉನ್ನತ ನಾಯಕರ ನೇತೃತ್ವದಲ್ಲಿ ದೇಶದಾದ್ಯಂತ ಇರುವ ಇಡಿ ಕಚೇರಿಗಳ ಮುಂಭಾಗ ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸಿತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯನ್ ಪಕ್ಷದ ಪ್ರಚಾರದಲ್ಲಿ ಹಣಕಾಸು ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾದ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯುತ್ತಿದೆ. ಸೋನಿಯಾ ಗಾಂಧಿ ಕೂಡ ಜೂನ್ 23 ರಂದು ಪ್ರಕರಣದಲ್ಲಿ ಇಡಿ ಮುಂದೆ ಹಾಜರಾಗಬೇಕಾಗಿದೆ. ಸದ್ಯ ಅವರು ಕೋವಿಡ್ ಕಾರಣದಿಂದ ಆಸ್ಪತ್ರೆಯಲ್ಲಿದ್ದಾರೆ.

ಬೆಳಗ್ಗೆ ಪಕ್ಷದ ನಾಯಕರು, ಬೆಂಬಲಿಗರೊಂದಿಗೆ ಆಗಮಿಸಿದ ರಾಹುಲ್ , ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಗೆ ಹೋಗಿ ವಿಚಾರಣೆಗೆ ಹಾಜರಾದರು. ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಧ್ಯಾಹ್ನ ಸುಮಾರು 2 ಗಂಟೆಗೆ ಅವರಿಗೆ ಊಟಕ್ಕೆ ತೆರಳಲು ಅವಕಾಶ ನೀಡಲಾಯಿತು. ಈ ಸಂದರ್ಭ ಅವರು ಸೋನಿಯಾ ಭೇಟಿಯಾಗಲು ಆಸ್ಪತ್ರೆಗೆ ತೆರಳಿದರು.ಸಂಸದ ರಾಹುಲ್ ಗಾಂಧಿಯನ್ನು ಅತ್ತ ಇಡಿ ಅಧಿಕಾರಿಗಳು ಪ್ರಶ್ನಿಸುತ್ತಿರುವ ವೇಳೆ ದೇಶದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ