NEWS: ಗಲಭೆಕೋರರು ಎಸೆದ ಕಲ್ಲುಗಳನ್ನು ಸ್ವಚ್ಛಗೊಳಿಸಿದ ಪೊಲೀಸರ ವಿಡಿಯೋ ವೈರಲ್
Friday, June 17, 2022
ಬಿಹಾರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೇಂದ್ರದ ಯೋಜನೆಯಾದ ಅಗ್ನಿಪಥ್ ಗೆ ವಿರೋಧಿಸಿ ಗಲಭೆ ಎದ್ದಿವೆ. ದೇಶ ರಕ್ಷಣೆ ಮಾಡುವ ಸೈನ್ಯಕ್ಕೆ ಸೇರುವ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿ ದೇಶದ ಪ್ರಮುಖ ಸಂಪತ್ತಾದ ರೈಲು, ರೈಲ್ವೆ ನಿಲ್ದಾಣದಲ್ಲಿ ದಿನನಿತ್ಯ ಕೂಲಿ ಮಾಡುವ ಟ್ರೇ, ಸಾಧನಗಳು, ಸಣ್ಣ ಪುಟ್ಟ ಅಂಗಡಿಗಳನ್ನು ಆಕ್ರೋಶದ ನೆಪದಲ್ಲಿ ಹಾನಿಗೆಡವಲಾಗಿದೆ. ದೇಶದ ಭವಿಷ್ಯವಾದ ಮಕ್ಕಳು ಸಾಗುವ ಬಸ್ಸುಗಳನ್ನೂ ಬಿಟ್ಟಿಲ್ಲ. ಪರಿಣಾಮ, ಕಲ್ಲುಗಳ ರಾಶಿ ರಸ್ತೆಯಲ್ಲಿ ಬಿದ್ದಿದ್ದವು. ಇದನ್ನು ಪೊಲೀಸರು ಸ್ವಚ್ಛಗೊಳಿಸುವ ದೃಶ್ಯವೀಗ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವಿನಾಶ್ ಶರಣ್ ಇದರ ಟ್ವೀಟ್ ಮಾಡಿದ್ದಾರೆ.
Respect for You.🙏 pic.twitter.com/Bb5uZktpZk
— Awanish Sharan (@AwanishSharan) June 16, 2022