POLITICAL: ಮಮತಾ ನೇತೃತ್ವದ ವಿಪಕ್ಷ ಸಭೆಗೆ ಆಪ್, ಟಿಆರ್ ಎಸ್, ವೈಎಸ್ಸಾರ್ ಪಕ್ಷಗಳ ಗೈರುಹಾಜರಿ
Wednesday, June 15, 2022
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವಲ್ಲಿ ಸಭೆಯೊಂದು ದೆಹಲಿಯಲ್ಲಿ ಬುಧವಾರ ನಡೆದಿದ್ದು, ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಇರಾದೆಯೊಂದಿಗೆ ಸಭೆ ನಡೆದಿತ್ತು.
ಆದರೆ ಸಭೆಯಲ್ಲಿ 17 ಪಕ್ಷಗಳು ಭಾಗವಹಿಸಿದ್ದು, ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ, ಟಿಆರ್ ಎಸ್, , ವೈಎಸ್ಸಾರ್ ಪಕ್ಷಗಳು ಗೈರುಹಾಜರಾಗಿವೆ. ಕಾಂಗ್ರೆಸ್, ಎಡ ಪಕ್ಷಗಳು, ಶಿವಸೇನೆ, ಆರ್.ಜೆ.ಡಿ., ಸಮಾಜವಾದಿ, ನ್ಯಾಷನಲ್ ಕಾನ್ಫರೆನ್ಸ್ ನಂಥ ಪಕ್ಷಗಳು ಭಾಗವಹಿಸಿದ್ದವು.