NEWS: ಕೊಡಗು, ಸುಳ್ಯದಲ್ಲಿ ಮತ್ತೆ ಭೂಮಿ ಗಡಗಡ
Saturday, July 2, 2022
ಸುಳ್ಯ ಮಡಿಕೇರಿ ಸಂಪರ್ಕ ರಸ್ತೆಯಾದ ಸಂಪಾಜೆ ಘಾಟಿಯಲ್ಲಿ ಮತ್ತೆ ಭೂಕುಸಿತದ ಸಮಸ್ಯೆ ತಲೆದೋರಿದ್ದರೆ, ಸುಳ್ಯ, ಕೊಡಗಿನ ಗಡಿಭಾಗಗಳಲ್ಲಿ ಶನಿವಾರವೂ ಸಣ್ಣ ಮಟ್ಟಿನ ಕಂಪನದ ಅನುಭವ ಉಂಟಾಗಿದೆ.
ದ.ಕ. ಮತ್ತು ಕೊಡಗು ಗಡಿ ಭಾಗಗಳಾದ ತೊಡಿಕಾನ, ಸಂಪಾಜೆ, ಗೂನಡ್ಕ ಮತ್ತಿತರ ಕಡೆಗಳಲ್ಲಿ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಮಧ್ಯಾಹ್ನ 1.21ಕ್ಕೆ ತೊಡಿಕಾನದ ದೊಡ್ಡಕುಮೇರಿ ಎಂಬಲ್ಲಿ ಲಘು ಭೂಕಂಪನದ ಅನುಭವವಾಗಿತ್ತು. ಇದೀಗ ರಾತ್ರಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜೂನ್ 25ರಂದು ಮೊದಲ ಬಾರಿ, ಜೂನ್ 28 ಮತ್ತು ಜುಲೈ 1ರಂದು ಒಂದೇ ದಿನ ಎರಡು ಬಾರಿ ಭೂಕಂಪನದ ಅನುಭವ ಉಂಟಾಗಿದ್ದರೆ, ಇದೀಗ ಜುಲೈ 2ರಂದು ಮತ್ತೆ ಮಧ್ಯಾಹ್ನ ಮತ್ತು ರಾತ್ರಿ ಕಂಪನದ ಅನುಭವವಾಗಿದೆ.
ಅದೇ ರೀತಿ ಕೊಡಗಿನ ಗಡಿಭಾಗವಾದ ಚೆಂಬು ಪ್ರದೇಶದಲ್ಲಿ ನಿನ್ನೆ ಭೂಕಂಪನದ ಅನುಭವ ಉಂಟಾಗಿತ್ತು.