NEWS: ಬಿಗು ಭದ್ರತೆ ನಡುವೆ ಅಮರನಾಥ ಯಾತ್ರೆ ಆರಂಭ
Sunday, July 3, 2022
ಬಿಗು ಭದ್ರತೆ ನಡುವೆ ಅಮರನಾಥ ಯಾತ್ರೆಯ ಮೊದಲ ತಂಡ ಕಾಶ್ಮೀರದ ಬಲ್ತಾಲ್ ಮತ್ತು ಚಂದನ್ ವಾರಿ ಎಂಬ ಮಾರ್ಗಗಳಲ್ಲಿ ಆರಂಭಿಸಿದೆ.
43 ದಿನಗಳ ಈ ಯಾತ್ರೆ ಕಾಶ್ಮೀರದ ದಕ್ಷಿಣ ಭಾಗದ ಅನಂತನಾಗ್ ಮತ್ತು ಬಾಲ್ತಾಲ್ ಪಕ್ಕದಿಂದ ಆರಂಭಗೊಂಡಿದೆ. ಎರಡು ವರ್ಷಗಳ ಕೋವಿಡ್ ಬ್ರೇಕ್ ಬಳಿಕ ಈ ಯಾತ್ರೆ ಆರಂಭಗೊಂಡಿದ್ದು ಯಾತ್ರಾರ್ಥಿಗಳಲ್ಲೂ ಸಂತಸ ತಂದಿದೆ. ಅಮರನಾಥ ಗುಹೆ ಸಮುದ್ರಮಟ್ಟದಿಂದ 3880 ಮೀಟರ್ ಎತ್ತರದಲ್ಲಿದೆ. ಆಗಸ್ಟ್ 11ರಂದು ಯಾತ್ರೆ ಕೊನೆಗೊಳ್ಳುತ್ತದೆ.