NEWS: ಮಳೆ, ಭೂಕುಸಿತ, ಕಡಲ್ಕೊರೆತ: ಕರಾವಳಿಯ ಹಲವೆಡೆ ಜನಜೀವನ ಅಸ್ತವ್ಯಸ್ತ
Tuesday, July 5, 2022
ಮರವಂತೆ |
ಕಾಸರಗೋಡು ಜಿಲ್ಲೆಯಲ್ಲಿ ಸುರಿದ ಮಳೆಗೆ ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ಪ್ರವಾಹ ನುಗ್ಗಿ ಬಂತು. ಕುಂಬಳೆಯ ರೈಲ್ವೆ ನಿಲ್ದಾಣದಲ್ಲಿ ನೀರು ಹರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಇನ್ನು ಬೆಳಗ್ಗೆಯೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದ ಕಾರಣ,ಮಕ್ಕಳು ಮನೆಯಲ್ಲೇ ಬೆಚ್ಚಗೆ ಕುಳಿತರು. ನೇತ್ರಾವತಿ ನದಿ ನೀರಿನ ಮಟ್ಟ ಏರತೊಡಗಿದ್ದರೆ, ಕುಮಾರಧಾರಾ ನದಿಯೂ ಏನೂ ಕಮ್ಮಿ ಇಲ್ಲ ಎಂಬಂತೆ ಮೈತುಂಬಿ ಹರಿಯತೊಡಗಿತು.