Movie: ಕಾಣೆಯಾಗುವ ಮಕ್ಕಳ  ಚಿತ್ರಕಥೆಯಲ್ಲಿ .. ಕಥೆಯೂ  ಕಾಡಿನಲ್ಲಿ ಕಳೆದುಹೋಗುವ ವ್ಯಥೆ.

Movie: ಕಾಣೆಯಾಗುವ ಮಕ್ಕಳ ಚಿತ್ರಕಥೆಯಲ್ಲಿ .. ಕಥೆಯೂ ಕಾಡಿನಲ್ಲಿ ಕಳೆದುಹೋಗುವ ವ್ಯಥೆ.

 


ವಿಕ್ರಾಂತ್ ರೋಣ ಗರಗರಗರ... ಡೆನ್ನನಾ..ಡೆನ್ನನಾ...!!
- ಅನಿಲ್ ಎಚ್.ಟಿ.
ಒಂದಾನೊಂದು ಕಾಲದಲ್ಲಿ ಕಮರೊಟ್ಟು ಎಂಬ ಗ್ರಾಮದಲ್ಲಿ ನಡೆಯುವ ಕಥೆಯಿದು....
ಹೀಗೆಂದು ಪ್ರಾರಂಭವಾಗುವ ಕಥೆಯ ಚಿತ್ರ ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ನ ಹೊಸ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.
ರಂಗಿತರಂಗ ಎಂಬ ವಿನೂತನ ಮೇಕಿಂಗ್ ಚಿತ್ರ ನೋಡಿದವರಿಗೆ ವಿಕ್ರಾಂತ್ ರೋಣ ಆ ಚಿತ್ರದ ಕಮರೊಟ್ಟು ಗ್ರಾಮದ ಮತ್ತೊಂದು ಕಥೆಯನ್ನು ನೆನಪಿಸುತ್ತದೆ. ಆಶ್ಟಯ೯ ಬೇಡ. ರಂಗಿತರಂಗ ನಿದ೯ಶಿಸಿದ್ದ ಅನೂಪ್ ಭಂಡಾರಿ ವಿಕ್ರಾಂತ್ ರೋಣ ನಿದೇ೯ಶಿಸಿದ್ದಾರೆ ಮತ್ತು ಆ ಚಿತ್ರದ ಹಿರೋ ನಿರೂಪ್ ಭಂಡಾರಿ ಕೂಡ ವಿಕ್ರಾಂತ್ ರೋಣದ ಪ್ರಮುಖ ಪಾತ್ರದಲ್ಲಿ ಆಭ೯ಟಿಸಿದ್ದಾರೆ. ಭಂಡಾರಿ ಬ್ರದರ್ಸ್ ರಂಗಿತರಂಗದ ಯಶಸ್ಸಿನ ಅಲೆಯಲ್ಲಿಯೇ ವಿಕ್ರಾಂತ್ ರೋಣ ಕಥೆ ಬರೆದದ್ದು ಸ್ಪಷ್ಟ.
ರಂಗಿತರಂಗದಲ್ಲಿ ಇರುವಂತೆಯೇ ವಿಕ್ರಾಂತ್ ರೋಣದಲ್ಲಿಯೂ ಭೂತಚೇಷ್ಟೆಯಿದೆ. ಅಲ್ಲಿ ಮನುಷ್ಯರು ಕಣ್ಮರೆಯಾದರೆ ರೋಣದಲ್ಲಿ ಮಕ್ಕಳು ಕಣ್ಮರೆಯಾಗುತ್ತಾರೆ. ಹಲವೊಮ್ಮೆ ಚಿತ್ರದ ಕಥೆಯೇ ಕಳೆದುಹೋಗುತ್ತಿದೆಯೇನೋ ಅನ್ನಿಸುವಷ್ಟರಲ್ಲಿ ಸುದೀಪ್ ಮೈ ದಡವಿಕೊಂಡು ಬಂದಂತೆ ಮತ್ತೆ ಮೂಲಟ್ರ್ಯಾಕ್ ಗೆ ಕಥೆ ಬರುತ್ತದೆ. ಸಾಕಿನ್ನು ಎಂದು ಅನಿಸುವುದು ನಿದೇ೯ಶಕನಿಗೂ ಗೊತ್ತಾಗುವಂತೆ ಆತುರಾತುರವಾಗಿ ಕ್ಲೆಮ್ಯಾಕ್ಸ್ ಮುಗಿಸಿ ಗ್ರಾಮದಿಂದ ಎಲ್ಲರನ್ನೂ ಸಾಗಹಾಕಲಾಗಿದೆ.
ಅಸಲಿ ಆಟ ಇನ್ನು ಶುರು.. ಎಂಬ ಸುದೀಪ್ ಡೈಲಾಗ್ ಪರದೆ ಮೇಲೆ ಕೇಳಲು ಮಾತ್ರ ಚೆಂದ. ಅಸಲಿ ಆಟ ಯಾವುದು ಎಂದು ಗೊತ್ತಾಗುವುದು ಕೊನೆಗೇ...
ಕಮ್ಮರೊಟ್ಟು ಎಂಬ ಕಾಡಿನ ಮಧ್ಯದ ಗ್ರಾಮದಲ್ಲಿ ಕಣ್ಮರೆಯಾಗುವ 14 ಮಕ್ಕಳು ಮತ್ತು ಕೊಲೆಯಾದ ಪೊಲೀಸ್ ಇನ್ಸ್ ಪೆಕ್ಟರ್ ಜಾಡು ಹುಡುಕಿ ಗ್ರಾಮಕ್ಕೆ ಬರುವ ವಿಕ್ರಾಂತ್ ರೋಣನ ಪಾತ್ರದಲ್ಲಿ ಸುದೀಪ್ ಮಿಂಚಿದ್ದಾರೆ. ಸುದೀಪ್ ಇಂಥ ಪಾತ್ರ ಒಪ್ಪಿಕೊಂಡದ್ದು ಅಚ್ಚರಿಯೇ ಹೌದಾದರೂ ಸುದೀಪ್ ಈ ಪಾತ್ರಕ್ಕೆ ಅತ್ಯಂತ ಸೂಟ್ ಆದವರಂತೆ ಕಂಗೊಳಿಸುವುದು ಅವರೊಳಗಿನ ಪ್ರತಿಭೆಗೆ ಕೈಗನ್ನಡಿಯಂತಿದೆ.
ಸುದೀಪ್ ಚಿತ್ರದ ಹಿರೋನೋ ವಿಲನ್ನೋ ಎಂಬುದು ಮಧ್ಯಂತರದಲ್ಲಿ ಗೊತ್ತಾಗಲಿದೆ.!! ಆದರೆ ಕಣ್ಣಿಗೆ ಕಂಡದ್ದೆಲ್ಲಾ ನಿಜವೇನಲ್ಲ ಎಂದು ವಿಕ್ರಾಂತ್ ರೋಣದ ಅನೇಕ ದೖಶ್ಯಗಳು ಆಗಾಗ್ಗೆ ನೆನಪಿಸುತ್ತಾ ಸಾಗುತ್ತದೆ.
ಇಡೀ ಕಥೆ ಕಮ್ಮರೊಟ್ಟು ಎಂಬ ಕಾನನದ ನಡುವಿನ ಹಳ್ಳಿಯಲ್ಲಿ ನಡೆಯುವುದರಿಂದ ಮತ್ತು ಚಿತ್ರದ ಕಥೆಯಲ್ಲಿ ಭೂತ ಹಾಸುಹೊಕ್ಕಾಗಿರುವದರಿಂದ ಪ್ರೇಕ್ಷಕರನ್ನು ಭಯಭೀತಗೊಳಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಕತ್ತಲಲ್ಲೇ ಇಡೀ ಚಿತ್ರ ಸಾಗುತ್ತದೆ. ಕಾಡಿನ ಕಾಗ೯ತ್ತಲು ಜತೆಗೆ ಚಿತ್ರಮಂದಿರದೊಳಗಿನ ಕತ್ತಲು ಎರಡೂವರೆಗಂಟೆಗಳ ಕಾಲ ಪ್ರೇಕ್ಷಕರನ್ನು ಕಾಡಿ ಬೆಳಕಿಗಾಗಿ ಬೇಡುತ್ತದೆ.
ಮಿಲನ ನಾಗರಾಜ್ ಚಿತ್ರದ ಹಿರೋಯಿನ್ ಆಗಿದ್ದರೂ ಕಾಣಿಸಿಕೊಳ್ಳೋದು ಕಡಮೆ. ಕಂಡಷ್ಟು ಹೊತ್ತೂ ಕಣ್ಣಿಗೆ ತಂಪು. ಚಿತ್ರದ ಪೋಸ್ಟರ್ ಜತೆಯಲ್ಲಿಯೇ ಚಿತ್ರದಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುವುದು ರ.. ರ. ರಕ್ಕಮ್ಮ ಹಾಡಿನಲ್ಲಿ ಕಾಣುವ ಜ್ಯಾಕ್ಲಿನ್ ಫನಾ೯ಂಡೀಸ್. ಬಹಳ ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸುವಂತೆ ಮಾಡುವ ಶಕ್ತಿಯುತ ಹಾಡಿದು. ..ಚಾಂದ್ ನಿ.. ಚಾಂದಿನಿ ಹಾಡಿನ ಮ್ಯೂಸಿಕ್ ರು.. ರು.. ರುಕ್ಕಮ್ಮದಲ್ಲಿ ಕೇಳಿದಂತಾಗುತ್ತದೆ. ಇರಲಿ. ಹಾಡೂ. ಕುಣಿತ ಎರಡೂ ಚೆನ್ನಾಗಿದೆ.
ವಿಕ್ರಾಂತ್ ರೋಣ.. ಕೊನೇಯವರೆಗೂ ಸಸ್ಪೆನ್ಸ್ ಚಿತ್ರದಂತೆ ಸಾಗುತ್ತದೆ. ಬೇರೆ ಬೇರೆ ಕ್ಕೈಂನ ಆಯಾಮಗಳೂ ಚಿತ್ರದಲ್ಲಿದೆ. ಜತೆಜತೆಗೇ ತಾಯಿ - ಮಗನ ಸೆಂಟಿಮೆಂಟ್, ತಂದೆ - ಮಗಳ ಸೆಂಟಿಮೆಂಟ್, ವಿಕ್ರಾಂತ್ ರೋಣವಿಗೆ ಭಾವುಕತೆಯ ಸ್ಪಷ೯ ನೀಡಿದೆ.
ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಭಜ೯ರಿಯಾಗಿದೆ. ಸಸ್ಪೆನ್ಸ್ ಕಥೆಗೆ ಯಾವ ರೀತಿಯ ಮ್ಯೂಸಿಕ್ ಬೇಕೋ ಅಥೈ೯ಸಿಕೊಂಡು ಅಜನೀಶ್ ನೀಡಿದ್ದಾರೆ.
ಕತ್ತಲ ಕಮರೊಟ್ಟು ಗ್ರಾಮಕ್ಕೆ ಕ್ಯಾಮರ ಹಿಡಿದು ಹಳೇ ಮನೆಯ ನಿಗೂಡತೆಯನ್ನು ಬಹಳ ಚೆನ್ನಾಗಿ ಕ್ಯಾಮರ ಕಣ್ಣಲ್ಲಿ ತೋರಿಸುವಲ್ಲಿ ಕ್ಯಾಮರಮನ್ ವಿಲಿಯಂ ಡೇವಿಡ್ ಅತ್ಯಂತ ಸಫಲರಾಗಿದ್ದಾರೆ. ನಿಮ್ಮನ್ನು ಗ್ರಾಮದೊಳಗೆ, ಭೂತದ ಆವಾಸ ಸ್ಥಾನಕ್ಕೆ, ದೇವಾಲಯದೊಳಕ್ಕೆ ಕೊಂಡೊಯ್ಯುವಲ್ಲಿ ಕ್ಯಾಮರ ವಕ್೯ ಕಾರಣವಾಗುತ್ತದೆ.
ರಂಗಿತರಂಗದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಟಿಸಿದ್ದ ಪಾತ್ರಧಾರಿ ಕಾತಿ೯ಕ್ ರಾವ್ 11 ಮಕ್ಕಳ ತಂದೆಯಾಗಿ ಕಾರ್ ಡ್ರೈವರ್ ಪಾತ್ರದಲ್ಲಿ ರೋಣದಲ್ಲಿಯೂ ನಗಿಸುತ್ತಾರೆ. ಉಸಿರು ಬಿಗಿ ಹಿಡಿಯುವ ದೖಶ್ಯಗಳ ನಡುವೆ ಇವರ ಡೈಲಾಗ್ ಗಳು ಕೊಂಚ ರಿಲೀಫ್ ನೀಡುತ್ತದೆ.
ಬಹಳ ವಷ೯ಗಳ ನಂತರ ತ್ರಿಡಿ ರೂಪದಲ್ಲಿ ಚಿತ್ರವೊಂದು ಸುಂದರವಾಗಿ ತೆರೆಕಂಡಿದೆ. ತ್ರಿಡಿ ಕನ್ನಡಕ ಹಾಕಿಕೊಂಡು ವಿಕ್ರಾಂತ್ ರೋಣ ನೋಡುತ್ತಿದ್ದರೆ, ಬೆಂಕಿಯುಂಡೆಯ ಜತೆಜತೆಗೇ ಜಲಪಾತದ ನೀರ ಹನಿಗಳು ಕೂಡ ನಿಮ್ಮ ಮುಖಕ್ಕೆ ಮುತ್ತನ್ನಿಟ್ಟಂತೆ ಭಾಸವಾದೀತು. ಎಚ್ಚರಿಕೆ.. ಕೋವಿಯಿಂದ ಸಿಡಿಯುವ ಗುಂಡು ಯಾವುದೇ ಕ್ಷಣದಲ್ಲಿಯೂ ನಿಮ್ಮನ್ನು ಅಪ್ಪಳಿಸಿ ಬೆಚ್ಚಿಬೀಳಿಸಿತು.. ಜತೆಗೇ ಭೂತದ ಮುಖವೂ.. ಹುಷಾರ್..
ತ್ರಿಡಿ ಪ್ರಭಾವವನ್ನು ವಿಕ್ರಾಂತ್ ರೋಣದಲ್ಲಿ ಚೆನ್ನಾಗಿಯೇ ಬಳಸಿಕೊಳ್ಳಲಾಗಿದೆ. ಕೆಲವೊಮ್ಮೆ ಮಕ್ಕಳ ವಿಡಿಯೋದಂತೆ ಮಕ್ಕಳಾಟದಂತೆ ತ್ರಿಡಿ ಇಮೇಜ್ ಗೋಚರಿಸುತ್ತದೆ.
ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರು ತ್ರಿಡಿ ಕನ್ನಡಕವನ್ನು ಬಳಸಿ ಮತ್ತೆ ಅದನ್ನೇ ಬೇರೆ ಪ್ರೇಕ್ಷಕರು ಧರಿಸಲು ನೀಡುತ್ತಿರುವುದು ಮಾತ್ರ ಆರೋಗ್ಯದ ದೖಷ್ಟಿಯಿಂದ ಸರಿ ಅಲ್ಲವೇ ಅಲ್ಲ.. ಅನಾರೋಗ್ಯದ ಭೂತ ಹರಡಲು ಸಿನಿಮಾ ಕಾರಣವಾಗಬಾರದಷ್ಟೇ..
ರಂಗಿತರಂಗದಲ್ಲಿ ಹೇಗೆ ಸಸ್ಪೆನ್ಸ್ ಕಾಪಾಡಲಾಗಿತ್ತೋ ಹಾಗೇ ವಿಕ್ರಾಂತ್ ರೋಣದಲ್ಲಿ ಭಂಡಾರಿ ಬ್ರದರ್ಸ್ ರಹಸ್ಯ ಕಾಯ್ದುಕೊಂಡಿದ್ದಾರೆ. ರಂಗಿತರಂಗದಲ್ಲಿ ರವಿಶಂಕರ್ ನಟಿಸಿದಷ್ಟೇ ಅದ್ಬುತವಾಗಿ ಅನೂಪ್ ಭಂಡಾರಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಏನೂಂತ ತಿಳಿಯಲು ನೀವೇ ಚಿತ್ರ ನೋಡಿ.
ವಿಕ್ರಾಂತ್ ರೋಣ.. ಚೆನ್ನಾಗಿಲ್ಲ.. ಕಥೆಯೇ ಇಲ್ಲ.. ಕಥೆ ಅಥ೯ವೇ ಆಗೋಲ್ಲ ಎಂಬೆಲ್ಲಾ ವಿಮಶೆ೯ ಕೇಳಿಬಂದಿದೆ.
ಎಲ್ಲರನ್ನೂ ಎಲ್ಲರೂ ಮೆಚ್ಚಿಸಲು ಸಾಧ್ಯವಿಲ್ಲ. ರಂಗಿತರಂಗದ ಕಮರೊಟ್ಟು ಗ್ರಾಮವನ್ನು ನೀವು ಮೆಚ್ಚಿಕೊಂಡಿದ್ದರೆ.. ರೋಣದಲ್ಲಿ ವಿಕ್ರಾಂತ್ ನ ರಹಸ್ಯವನ್ನೂ ನೋಡಿಬಿಡಿ. ..
ದಿಡಿರನೇ ಮಕ್ಕಳೇ ಕಾಣೆಯಾಗುವ ಗ್ರಾಮದ ಕಥಾ ಚಿತ್ರದಲ್ಲಿ ಕಥೆಯೂ ಮಾಯವಾಗಿದ್ದರೆ.. ಚಿಂತೆ ಮಾಡಬೇಡಿ.. ಬೇರೆಲ್ಲವನ್ನೂ ಮನಸ್ಸಾರೆ ಎಂಜಾಯ್ ಮಾಡಿ..
ಇದು.. ಒಂದಾನೊಂದು ಕಾಲದಲ್ಲಿ ನಡೆಯುವ ಕಥೆ.. ಕಮರೊಟ್ಟು ಗ್ರಾಮದಲ್ಲಿ ಮಕ್ಕಳು ಕಾಣೆಯಾಗುವ ಕಥೆ.. ಗುಮ್ಮ ಎಂದು ಮಕ್ಕಳು ಕರೆಯುವಾಗಲೇ ಊರಿಗೆ ಮಗಳೊಂದಿಗೆ ಕಾಲಿಡುವ ಮಗಳನ್ನು ಕಳೆದುಕೊಂಡ ಅಪ್ಪನ ಕಥೆ. 28 ವಷ೯ಗಳ ಹಿಂದೆ ಬಾವಿಯಲ್ಲಿ ಸಾವನ್ನಪ್ಪಿದ ಕುಟುಂಬದವನ ಸೇಡಿನ ಕಥೆ..
ತಮಿಳು, ತೆಲುಗು, ಮಲಯಾಳದಲ್ಲಿ ಹೊಸ ಕಥೆಗಳುಳ್ಳ ಚಿತ್ರಗಳು ಬರುತ್ತಿದೆ ಎಂದು ಹೊಗಳುತ್ತಾ ಕನ್ನಡವನ್ನು ವಿನಾ ಕಾರಣ ದೂರುವವರ ವಿರುದ್ದ ಸೇಡು ತೀರಿಸಿಕೊಳ್ಳುವ ಕಥೆ....ರಂಗಿತರಂಗದ ಜಾಡಿನಲ್ಲಿಯೇ ಸಾಗುವ ವಿಕ್ರಾಂತ್ ರೋಣ ಒಮ್ಮೆ ನೋಡಲಡ್ಡಿಯಿಲ್ಲದ ರೆಟ್ರೋ ಮಾದರಿ ಸಿನಿಮಾ...
ಕಮರೊಟ್ಟು ಗ್ರಾಮದಲ್ಲಿ..
ಡೆನ್ನಾನ.. ಡೆನ್ನಾನ....ಗರಗರ.. ಗರ.. ಗಂಗರ..

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ