POLITICAL: 2024ರ ಕೇಂದ್ರ ಚುನಾವಣೆ: ಬಿಜೆಪಿಗೆ ಸಾರಥಿ ಯಾರು?
Monday, August 1, 2022
ಪಾಟ್ನ: 2024ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರ ನೇತೃತ್ವವಿರಲಿದೆ ಎಂದು ಗೃಹಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದು, ಪಾಟ್ನಾದಲ್ಲಿ ನಡೆದ ವಿವಿಧ ಮೋರ್ಚಾಗಳ ಕಾರ್ಯಕಾರಿಣಿ ಸಮಾರೋಪದಲ್ಲಿ ಮಾತನಾಡಿ, ಬಿಹಾರದಲ್ಲಿ ಜೆಡಿಯು ಜೊತೆ ಪಕ್ಷ ಮುನ್ನಡೆಯಲಿದೆ ಎಂದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, 2024ರ ಲೋಕಸಭೆ ಮತ್ತು 2025ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಹೋರಾಡಲಿದೆ ಎಂದಿದ್ದಾರೆ.