CRIME: ಮಂಗ್ಳೂರು ಬೀಚ್ ನಲ್ಲಿ ವಿದ್ಯಾರ್ಥಿನಿಯ ರೇಪ್, ಬ್ಲಾಕ್ಮೇಲ್ - ಆರೋಪಿ ಅರೆಸ್ಟ್
Monday, August 1, 2022
ಮಂಗಳೂರು ಬೀಚ್ ನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ನಡೆಸಿ ಬ್ಲಾಕ್ ಮೇಲ್: ಆರೋಪಿ ಮೀನು ಲಾರಿ ಚಾಲಕ ಮುನಾಝ್ ಬಂಧನ
ಮಂಗಳೂರು: ಮಂಗಳೂರಿನ ಮೀನು ಲಾರಿ ಚಾಲಕ ಮುನಾಝ್ ಅಹಮದ್ (27) ಎಂಬಾತ ಮಂಗಳೂರಿನ ಎನ್.ಐ.ಟಿ.ಕೆ. ಬೀಚ್ ಗೆ ಸಹಪಾಠಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿಯ ಅತ್ಯಾಚಾರವೆಸಗಿ, ವಿಡಿಯೋ ಸೆರೆಹಿಡಿದು, ಬ್ಲಾಕ್ ಮೇಲ್ ಮಾಡಿದ್ದಾಗಿ ಆರೋಪಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯ ಸಹಪಾಠಿಯನ್ನು ಆರೋಪಿ ಹೆದರಿಸಿ ಓಡಿಸಿ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಬಳಿಕ ಅದನ್ನು ತೋರಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಲಾಗಿದೆ.ಅತ್ಯಾಚಾರದ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ಕಮೀಷನರ್ ಭೇಟಿ ಮಾಡಿ ದೂರು ನೀಡಿದ್ದರು.