
ARREST: ರಾಜ್ಯದ ಹಲವೆಡೆ ಎನ್.ಐ.ಎ. ದಾಳಿ: ಇಬ್ಬರ ಬಂಧನ
Thursday, January 5, 2023
ಬೆಂಗಳೂರು: ರಾಜ್ಯದ ಹಲವೆಡೆ ಎನ್.ಐ.ಎ. ದಾಳಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಉಡುಪಿಯ ರೇಶಾನ್ ತಾಜುದ್ದೀನ್ ಶೇಕ್ ಮತ್ತು ಶಿವಮೊಗ್ಗದ ಹಜೇರ್ ಪಾರ್ಹನ್ ಬೇಗ್ ಬಂಧಿತ ಆರೋಪಿಗಳು. ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟದ ಪ್ರಕರಣದ ಸಂಬಂಧ ಬಂಧಿತ ಆರೋಪಿಯ ವಿಚಾರಣೆ ವೇಳೆ ಈ ಇಬ್ಬರ ಹೆಸರು ಬಂದ ಹಿನ್ನೆಲೆಯಲ್ಲಿ ಈ ಅರೆಸ್ಟ್ ಗಳು ಆಗಿವೆ ಎನ್ನಲಾಗಿದೆ.
ಆರೋಪಿ ಮಾಜ್ ಮುನೀರ್ ಗೆ ರೇಶಾನ್ ಸಹಪಾಠಿಯಾಗಿದ್ದು, ಇವರಿಬ್ಬರಿಗೆ ಐಸಿಸ್ ಸಂಪರ್ಕವಿತ್ತು ಹಾಗೂ ದೊಡ್ಡ ದುಷ್ಕೃತ್ಯ, ಉಗ್ರ ಚಟುವಟಿಕೆಗೆ ಹಣ ಪೂರೈಕೆ ಮಾಡುವಲ್ಲಿ ಇವರಿಬ್ಬರೂ ಒಳಗೊಂಡಿರುವ ಕುರಿತು ತನಿಖೆ ನಡೆಯುತ್ತಿದೆ.