Joshimutt: ಭೂಕಂಪ ಆಗಿಲ್ಲ, ಫ್ಲಡ್ ಬಂದಿಲ್ಲ, ಜೋಶಿಮಠ ಕುಸಿಯುತ್ತಿದೆ ಏಕೆ?
Saturday, January 7, 2023
ಗೋಪಾಲಕೃಷ್ಣ ಕುಂಟಿನಿ
ಭೂಕಂಪ ಆಗಿಲ್ಲ,ಫ್ಲಾಶ್ ಫ್ಲಡ್ ಬಂದಿಲ್ಲ. ಆದರೂ ಉತ್ತರಾಖಂಡದ ಜೋಶಿಮಠ ಎಂಬ ಪಟ್ಟಣ ನೋಡ್ತಾ ನೋಡ್ತಾ ಕುಸಿಯುತ್ತಿದೆ.
The city is actually sinking at its base.
ಬದರಿನಾಥ ಕ್ಷೇತ್ರಕ್ಕೆ ಗೇಟ್ ವೇ ಜೋಶಿಮಠ. ಆಜೂಬಾಜೂ 20 ಸಾವಿರ ಜನರುಳ್ಳ ಊರು.
ಕಳೆದ ಮೂರು ದಿನಗಳಿಂದ ಹಿಮಾಲಯದ ಈ ಚೆಂದದ ಊರು ಕುಸಿಯಲು ಶುರುವಾಗಿದೆ.ಇಂದಿಗೆ 700 ಮನೆಗಳು ಮುರಿದುಬಿದ್ದಿವೆ. ಮನೆ, ಹೋಟೇಲು,ಅಂಗಡಿ ಕಟ್ಟಡಗಳಲ್ಲಿ ಒಡಕು ಕಾಣಿಸುತ್ತಿವೆ.ಒಂದು ಬಿಲ್ಡಿಂಗು ಇನ್ನೊಂದರ ಮೈಮೇಲೆ ವಾಲಿಕೊಂಡಿದೆ. ರಸ್ತೆಗಳು ಬಾಯ್ದೆರೆಯುತ್ತಿವೆ. ದೇವಸ್ಥಾನಗಳು ಉರುಳಿ ಬೀಳುತ್ತಿವೆ. ಜನ panic ಆಗಿದ್ದಾರೆ.
ಇದು ಹೀಗೇ ಆಗುತ್ತದೆ ಎಂದು ತಜ್ಞರು ಹತ್ತು ವರ್ಷಗಳ ಹಿಂದೆಯೇ ಹೇಳಿದ್ದರು. 1976 ರಲ್ಲೇ ಮಿಶ್ರಾ ಆಯೋಗ ಜೋಶಿಮಠ ಭಾಗದಲ್ಲಿ Tectonic activity ಕುರಿತು ವಿವರಿಸಿ ಭೂಭಾರದ ಕುರಿತು ಎಚ್ಚರಿಸಿದಾಗ ಎಲ್ಲಾ ಗೇಲಿ ಮಾಡಿದ್ದರು.
ಚಾರ್ ಧಾಮ್ ಯಾತ್ರಾರ್ಥಿಗಳು,ಹಿಮಾಲಯ ಚಾರಣಿಗರು ಸಾವಿರ ಲಕ್ಷ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಜೋಶಿಮಠ ವ್ಯಾಪಾರಕ್ಕೆ ಇಳಿದಿತ್ತು. ಸಿಕ್ಕಸಿಕ್ಕಲ್ಲಿ ನೆಲ ಅಗೆದು ಹೋಟೇಲು, ವಸತಿಗೃಹ,ಹೋಮ್ ಸ್ಟೇ ಅಂತ ಕಟ್ಟಲಾಯಿತು. ಎಕ್ಸ್ಪ್ರೆಸ್ ಹೈವೇ,ಡೈರೆಕ್ಟ್ ಕನೆಕ್ಟಿವಿಟಿ ಅಂತ ನೆಲ,ಕಾಡು ಬಗೆಯಲಾಯ್ತು.
ಒಟ್ಟಾರೆಯಾಗಿ ಟೂರಿಸಂ ಬೆಳೆಸುವ ಹೆಸರಲ್ಲಿ ನೆಲಮೆಟ್ಟಿ ಹಾರಾಡಲಾಯಿತು. ಇಷ್ಟು ಸಾಲದು ಎಂದು ಹತ್ತಿರದಲ್ಲೇ ತಪೋವನದಲ್ಲಿ ವರ್ಲ್ಡ್ ಬ್ಯಾಂಕಿನವರು ದುಡ್ಡು ಕೊಡ್ತಾರೆ ಅಂತ ಅಲಕಾನಂದ ನದಿಗೆ ಅಣೆಕಟ್ಟು ಕಟ್ಟಿ Vishnugad HE Project ಆರಂಭಿಸಲಾಯಿತು. 13.4 ಕಿಮೀ ಉದ್ದದ ಸುರಂಗ, ಭೂಗತ ಪವರ್ ಹೌಸ್ ಇತ್ಯಾದಿ ಇತ್ಯಾದಿ. ಅಲಕಾನಂದ ನದಿಯನ್ನೇ ತಿರುಗಿಸಿಕೊಳ್ಳಲಾಯ್ತು.
ಜೋಶಿಮಠ ಉಳಿಯುತ್ತೋ ಇಲ್ಲವೋ ಗೊತ್ತಿಲ್ಲ. ನಮ್ಮ ಪಶ್ಚಿಮಘಟ್ಟ,ಶಿರಾಡಿ,ಸುಬ್ರಹ್ಮಣ್ಯ ನೋಡುತ್ತಿದ್ದರೆ ಜೋಶಿಮಠ ಕಣ್ಮುಂದೆ ಹಾಯುತ್ತದೆ.
( ಚಿತ್ರಗಳು ಟ್ವಿಟರ್ ನಲ್ಲಿ ಸಿಕ್ಕಿದ್ದು)