NEWS: ಪಾಕಿಸ್ತಾನ್ ಜೈಲು ಸೇರಿದರೇ ಅಸ್ಸೋಂ ಮಹಿಳೆ? ವಾಟ್ಸಾಪ್ ಕಾಲ್ ಆಧರಿಸಿ ತಾಯಿಯ ದೂರು
Wednesday, January 4, 2023
ಗುವಾಹಟಿ: ಅಸ್ಸೊಂನ ವಹೀದಾ ಬೇಗಂ ಎಂಬವರು 2022ರ ನವೆಂಬರ್ 10ರಿಂದ ಕಾಣೆಯಾಗಿದ್ದರು. ನವೆಂಬರ್ 30ರಂದು ಅವರ ತಾಯಿ ಆರಿಫಾ ಖಾತುನ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದಿದ್ದು, ಈ ವೇಳೆ ನಿಮ್ಮ ಮಗಳನ್ನು ಪಾಕಿಸ್ತಾನದಲ್ಲಿ ಬಂಧಿಸಿ ಜೈಲಿನಲ್ಲಿ ಇಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
ಇದೀಗ ಈ ಘಟನೆ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಅಸ್ಸೋಂನ ಮಹಿಳೆ ಪಾಕಿಸ್ತಾನದ ಜೈಲು ಸೇರಿದ್ದು ಹೇಗೆ ಎಂಬ ಕುರಿತು ಕುತೂಹಲ ಮೂಡಿದೆ. ಇದೀಗ ಈಕೆ ತಾಯಿ ನ್ಯಾಯದ ಮೊರೆ ಹೋಗಿದ್ದು, ದೆಹಲಿ ಹೈಕೋರ್ಟ್ ಗೆ ಅಪೀಲ್ ಮಾಡಿದ್ದಾರೆ. ಪ್ರಕರಣ ವಿಚಾರಣೆ ಶುಕ್ರವಾರ ನಡೆಯುತ್ತದೆ.
ಇಂಟ್ರಸ್ಟಿಂಗ್ ವಿಚಾರವೇನೆಂದರೆ, ವಹೀದಾ ಬೇಗಂ ತನ್ನ ಪತಿ ಮೊಹಮ್ಮದ್ ಮೊಹಸೀನ್ ಸಾವಿನ ನಂತರ ಆಸ್ತಿ ಮಾರಿದ್ದರು, 1.6 ಕೋಟಿ ರೂ ಹಣ ಪಡೆದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಕುರಿತು ನಾಗಾಂವ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.