DRDO: ಬಾಂಬ್ ಪತ್ತೆ, ನಿಷ್ಕ್ರಿಯಗೊಳಿಸುವ ರೋಬೋಟ್ ಅಭಿವೃದ್ಧಿಪಡಿಸಿದ ಡಿಆರ್ ಡಿಒ
DRDO displays the newly developed 'CSROV' robot at the 108th National Science Congress.#roboticsindia #robotics #robots #roboticsengineering #roboticsclub #technews #roboticsnews #roboticsforkids #roboticslab #technology #drdo #drdorobots #defence pic.twitter.com/iQZFKsEBz3
— The Robotics India 🇮🇳 (@robotics4india) January 7, 2023
ನಾಗಪುರದಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈ ರೋಬೋಟ್. ಇದು ಬಾಂಬ್ ಕಂಡು ಹಿಡಿಯುತ್ತೆ, ಹಾಗೂ ನಾಶಪಡಿಸುತ್ತೆ!!
ಹೌದು. ಭಾರತೀಯ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಬಾಂಬ್ ಪತ್ತೆ ಮಾಡುವ ಮತ್ತು ಅದನ್ನು ನಾಶಗೊಳಿಸುವ ರೋಬೋಟ್ ಒಂದನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಭಾರತೀಯ ಸೇನೆಗೆ ಮತ್ತಷ್ಟು ಬಲ ಬಂದಂತಾಗಿದೆ.
ನಾಗಪುರದ
ರಾಷ್ಟ್ರಸಂತ್ ತುಕ್ಡೋಜಿ ಮಹಾರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಪ್ರದರ್ಶನವಿತ್ತು. ಸೈನ್ಯದ
ಇತಿಹಾಸವಷ್ಟೇ ಅಲ್ಲ, ವರ್ತಮಾನದ ಬೆಳವಣಿಗೆ ಕುರಿತು ತಿಳಿಯಲು ಸಾಕಷ್ಟು ಮಂದಿ ಡಿ ಆರ್ ಡಿಒ ಗೆ
ಆಗಮಿಸಿ ಮಾಹಿತಿ ಪಡೆದರು.