JOSIMUTT FOLLOWUP: ಕುಸಿಯುತ್ತಿದೆ ಜೋಶಿಮಠ, ಮನೆ, ಕಟ್ಟಡಗಳ ಮೇಲೆ ಅಪಾಯದ ರೆಡ್ ಮಾರ್ಕ್!!

JOSIMUTT FOLLOWUP: ಕುಸಿಯುತ್ತಿದೆ ಜೋಶಿಮಠ, ಮನೆ, ಕಟ್ಟಡಗಳ ಮೇಲೆ ಅಪಾಯದ ರೆಡ್ ಮಾರ್ಕ್!!

 

 

 

ಉತ್ತರಾಖಾಂಡದ ಜೋಶಿಮಠವೀಗ ಯಾವಾಗ ಕುಸಿದು ಅದರ ಅಸ್ತಿತ್ವವೇ ನಾಶವಾಗುತ್ತದೋ ಹೇಳಲು ಸಾಧ್ಯವಿಲ್ಲ. ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೆರವು ಕಾರ್ಯ ಆರಂಭಿಸಿದೆ. ಮನೆ, ಕಚೇರಿ, ಹೋಟೆಲ್ ಗಳ ಮೇಲೆ ರೆಡ್ ಮಾರ್ಕ್ ಹಾಕಲಾಗುತ್ತಿದ್ದು, ಇದರ ಅರ್ಥ ಸುರಕ್ಷಿತವಲ್ಲ ಎಂದಾಗಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಜೋಶಿಮಠದಲ್ಲಿರುವ ಸರ್ಕಾರಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲಾಡಳಿತ ತೆರವು ಕಾರ್ಯ ಆರಂಭಿಸಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನ 1 ತಂಡ ಮತ್ತು ಎಸ್‌ಡಿಆರ್‌ಎಫ್‌ನ 4 ತಂಡಗಳನ್ನು ನಿಯೋಜಿಸಿದೆ. 


 ಜನವರಿ 2ರಿಂದ 3ರ ಮಧ್ಯರಾತ್ರಿಯಲ್ಲಿ ಈ ಪ್ರದೇಶದಲ್ಲಿ ಭೂಗತ ನೀರಿನ ಮೂಲಗಳು ಒಡೆದಿದ್ದರಿಂದ ಜೋಶಿಮಠದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಈ ಭೂಗತ ಜಲಮೂಲದಿಂದ ನಿಮಿಷಕ್ಕೆ ನಾಲ್ಕೈದು ನೂರು ಲೀಟರ್ ನೀರು ಹೊರ ಬರುತ್ತಿದೆ, ಈ ಮಂಜುಗಡ್ಡೆಯ ನೀರಿನಿಂದಾಗಿ ಭೂಗರ್ಭದ ಬಂಡೆ ಸವೆತವಾಗುತ್ತಿದೆ ಎನ್ನಲಾಗಿದೆ.


 2021ರ ಫೆಬ್ರವರಿಯಲ್ಲಿ ಜೋಶಿಮಠ ಸಮೀಪದ ತಪೋವನ ವಿಷ್ಣುಗಡದಲ್ಲಿನ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಮೇಘಸ್ಫೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಹತ್ತಾರು ಮಂದಿ ಕಣ್ಮರೆಯಾಗಿದ್ದರು. ಮೇಘಸ್ಫೋಟ, ಭೂಕುಸಿತ, ಭೂಕಂಪದಂಥ ಅವಘಡಗಳು ಹಿಮಾಲಯದ ತಪ್ಪಲಿನ ಈ ರಾಜ್ಯದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿರುವುದು ಕೂಡ ಜೋಶಿಮಠ ಹಾಗೂ ಉತ್ತರಾಖಂಡದ ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿವೆ. ಹಿಮಕರಗಿ ಬರುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಮಣ್ಣು ಬಿರುಕುಬಿಡುತ್ತದೆ. ಪರಿಣಾಮವಾಗಿ ಭೂಕುಸಿತದಂಥ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ. 


 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ