TAMILNADU: ತಮಿಳುನಾಡು ಸದನದಿಂದ ಹೊರನಡೆದ ರಾಜ್ಯಪಾಲ!! -ಟ್ವಿಟ್ಟರ್ ನಲ್ಲಿ ಗವರ್ನರ್ ರವಿ ವಿರುದ್ಧ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್!!!

TAMILNADU: ತಮಿಳುನಾಡು ಸದನದಿಂದ ಹೊರನಡೆದ ರಾಜ್ಯಪಾಲ!! -ಟ್ವಿಟ್ಟರ್ ನಲ್ಲಿ ಗವರ್ನರ್ ರವಿ ವಿರುದ್ಧ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್!!!

 

 

 ತಮಿಳುನಾಡು ರಾಜ್ಯದ ವಿಧಾನಸಭೆಯಲ್ಲಿ ಇಂದು ನಡೆದ ಘಟನೆಯೊಂದರಲ್ಲಿ ರಾಜ್ಯಪಾಲ ರವಿ ಸಿಎಂ ಸ್ಟಾಲಿನ್ ಭಾಷಣ ಮಾಡುತ್ತಿದ್ದಾಗ ಹೊರನಡೆದಿದ್ದಾರೆ. 


 ತಮಿಳುನಾಡು ವಿಧಾನಸಭಾ ಅಧಿವೇಶನದ  ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ  ಗದ್ದಲ, ಕೋಲಾಹಲ ಉಂಟಾಯಿತು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕೆಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ಪೀಕರ್ ಗೆ ಹೇಳಿದ ನಂತರ ಗವರ್ನರ್ ಆರ್ ಎನ್ ರವಿ ಸದನದಿಂದ ಹೊರ ನಡೆದರು.


 ರಾಜ್ಯ ಸರ್ಕಾರ ಸಿದ್ದಪಡಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಕಡತಕ್ಕೆ ಸೇರಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ರಾಜ್ಯಪಾಲರ ಭಾಷಣಕ್ಕೆ ಎಂಕೆ ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗವರ್ನರ್ ಸದನದಿಂದ ನಿರ್ಗಮಿಸಿದರು.

ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ರೆಕಾರ್ಡ್ ಮಾಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು. ಅದನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿತ್ತು. ಸಿಎಂ ಎಂಕೆ ಸ್ಟಾಲಿನ್ ಅವರ ಮಾತಿನಿಂದ ಬೇಸರಗೊಂಡ ರಾಜ್ಯಪಾಲ ಆರ್.ಎನ್.ರವಿ ಅವರು ರಾಷ್ಟ್ರಗೀತೆ ಹಾಡುವವರೆಗೂ ಕಾಯದೆ ವಿಧಾನಸಭೆಯ ಉಂಟಾದ ಗದ್ದಲದಿಂದ ಸಭೆಯಿಂದ ಹೊರ ನಡೆದದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ಇದರ ತರುವಾಯ ಗೆಟೌಟ್ ರವಿ ಎಂಬ ಹ್ಯಾಷ್ ಟ್ಯಾಗ್ ಇದ್ದಂಥಹ ಹೇಳಿಕೆಯೊಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಯಿತು.

ರಾಜ್ಯಪಾಲರ ಕ್ರಮವು ವಿಧಾನಸಭೆ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಎಂಕೆ ಸ್ಟಾಲಿನ್ ಹೇಳಿದರು. ಇದರಿಂದ ರಾಜ್ಯಪಾಲ ರವಿ ಅವರು ಬೇಸರಗೊಂಡು ಹೊರನಡೆದರು. ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಐ ಮತ್ತು ಸಿಪಿಐ(ಎಂ)  ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿದ್ದರು.

ರಾಜ್ಯಪಾಲ ರವಿ ವಿರುದ್ಧ ವಿಧಾನಸಭೆಯಲ್ಲಿ "ತಮಿಳುನಾಡು ಬಿಟ್ಟು ತೊಲಗಿ" ಘೋಷಣೆಗಳು ಪ್ರತಿಧ್ವನಿಸಿದವು. ಆಡಳಿತಾರೂಢ ಡಿಎಂಕೆ ಶಾಸಕರು ಕೂಡ "ಬಿಜೆಪಿ, ಆರ್ಎಸ್ಎಸ್ ಸಿದ್ಧಾಂತವನ್ನು ಹೇರಬೇಡಿ ಎಂದು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಅವರು ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ಕರೆ ನೀಡಿದರು, ಇದರ ಕುರಿತು ವಿಡಿಯೋ ಎಎನ್ಐ ಹಾಗೂ ಟೈಮ್ಸ್ ನೌ ವರದಿಗಳ ಲಿಂಕ್ ಇಲ್ಲಿದೆ.

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ