NEWS: 2023 ರಲ್ಲಿ ಜಗತ್ತಿನ 1/3 ಭಾಗದ ಜನರಿಗೆ ಆರ್ಥಿಕ ಹಿಂಜರಿತದ ಸಂಕಷ್ಟ: IMF ಮುಖ್ಯಸ್ಥೆ ಆತಂಕ
2023ನೇ ಇಸವಿಯನ್ನು ಸಂಭ್ರಮದಿಂದ ಎಲ್ಲರೂ ಸ್ವಾಗತಿಸುತ್ತಿರುವ ಹೊತ್ತಿನಲ್ಲೇ ಈ ವರ್ಷ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂದು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವ್ ಎಚ್ಚರಿಕೆ ನೀಡಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, ಹತ್ತು ತಿಂಗಳಾದರೂ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಅಂತ್ಯ ಕಾಣಿಸುತ್ತಿಲ್ಲ. ಇದರ ಜತೆ ಹಣದುಬ್ಬರ, ಬಡ್ಡಿದರ ಹೆಚ್ಚಳ, ಚೀನಾದಲ್ಲಿ ಕೋವಿಡ್ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ. ಅಮೆರಿಕ, ಯೂರೊಪ್, ಚೀನಾ ತನ್ನ ಆರ್ಥಿಕತೆಯಲ್ಲಿ ಕುಸಿತವೇನಾದರೂ ಕಂಡರೆ ಜಗತ್ತಿನ ಮೂರನೇ ಒಂದು ಭಾಗದ ಜನರು ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದ್ದಾರೆ ಎಂದರು. ಚೀನಾದಲ್ಲಿ ಪ್ರತಿಭಟನೆ ಬಳಿಕ ಅಲ್ಲಿನ ಜೀರೋ ಕೋವಿಡ್ ಪಾಲಿಸಿ ರದ್ದು ಮಾಡಲಾಗಿದೆ. ಚೀನಾದ ಬೆಳವಣಿಗೆ, ಜಾಗತಿಕ ಬೆಳವಣಿಗೆ ಆರ್ಥಿಕ ಹಿತದೃಷ್ಟಿಯಿಂದ ಆಶಾದಾಯಕವಾಗಿಲ್ಲ ಎಂಬುದು ಅವರ ಅಭಿಪ್ರಾಯ
2023 is going to be a tough year, warns IMF Chief Kristalina Georgieva@joinsumit brings you this report
— WION (@WIONews) January 2, 2023
Watch more: https://t.co/AXC5qRugeb pic.twitter.com/C956XNJFfD