CRIME: ಫುಡ್ ಡೆಲಿವರಿ ಯುವಕನ ಮೇಲೆ ತಂಡದಿಂದ ಹಲ್ಲೆ: ನಾಲ್ವರ ಬಂಧಿಸಿದ ಹೈದರಾಬಾದ್ ಪೊಲೀಸ್
ಹೈದರಾಬಾದ್: ತೆಲಂಗಾಣದ ಹುಮಾಯೂನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸಾಬ್ ಟ್ಯಾಂಕ್ ಎಂಬಲ್ಲಿನ ಹೋಟೆಲ್ ಒಂದರ ಮುಂಭಾಗ ನಡೆದ ಘಟನೆಯಲ್ಲಿ ಫುಡ್ ಡೆಲಿವರ್ ಬಾಯ್ ಮೇಲೆ ಗ್ರಾಹಕ ಮತ್ತು ಆತನ ಸಹಚರರಾದ ಸುಮಾರು 15 ಮಂದಿ ಕ್ಷುಲ್ಲಕ ಕಾರಣಕ್ಕಾಗಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಯುವಕ ಪಕ್ಕದಲ್ಲಿದ್ದ ಹೋಟೆಲ್ ಅಡುಗೆ ಮನೆಗೆ ಓಡಿದ್ದು, ತಂಡ ಆತನ ಬೆನ್ನಟ್ಟಿದೆ. ಈ ಸಂದರ್ಭ ಕುದಿಯುವ ಎಣ್ಣೆ ಯುವಕನಷ್ಟೇ ಅಲ್ಲ, ಹೋಟೆಲ್ ಸಿಬ್ಬಂದಿ ಮೇಲೂ ಬಿದ್ದಿದೆ. ಪರಿಣಾಮ, ಯುವಕ ಇಲ್ಯಾಸ್ ಮತ್ತು ಉದ್ಯೋಗಿಗಳಾದ ಸೋನು ಮತ್ತು ಸಜ್ಜನ್ ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಸಂಬಂಧ ನಾಲ್ವರನ್ನು ಹೈದರಾಬಾದ್ ಪೊಲೀಸ್ ಬಂಧಿಸಿದೆ.
#Hyderabad police arrested five persons in connection with an attack at a hotel in which a food delivery boy and two others were critically injured.@hydcitypolice pic.twitter.com/ixB30wDSkS
— IANS (@ians_india) January 3, 2023