SANTRO RAVI ARREST: ಕರ್ನಾಟಕದಿಂದ ಗುಜರಾತ್ ಗೆ - 11 ದಿನ ಪೊಲೀಸ್ ಕಣ್ಣುತಪ್ಪಿಸಿದ್ದ ಸ್ಯಾಂಟ್ರೊ ರವಿ ಕೊನೆಗೂ ಅರೆಸ್ಟ್, ಮುಂದೇನಾಗುತ್ತೆ?
ಕೊನೆಗೂ ಭಾರಿ ವಿವಾದ ಸೃಷ್ಟಿಸಿದ್ದ ಸ್ಯಾಂಟ್ರೊ ರವಿ ಬಂಧನವಾಗಿದೆ. ಈ ಕುರಿತು ವ್ಯಾಪಕ ಪ್ರತಿಕ್ರಿಯೆಗಳು ಬರಲಾರಂಭಿಸಿವೆ.
ಸ್ಯಾಂಟ್ರೋ ರವಿಯ ವಿರುದ್ಧ ವರ್ಗಾವಣೆ ದಂಧೆಯ ವಿಚಾರವಾಗಿ ಸರ್ಕಾರ ಇನ್ನೂ ಪ್ರಕರಣ ದಾಖಲಿಸಲಿಲ್ಲ.
— Karnataka Congress (@INCKarnataka) January 13, 2023
ಆತನ ಬಂಧನವಾಗಿದ್ದು ಪತ್ನಿಯ ದೂರಿನ ಆಧಾರದಲ್ಲಿ ಹೊರತು ಸರ್ಕಾರದ ದೂರಿನಲ್ಲಿ ಅಲ್ಲ.
ಆತನ ಎಲ್ಲಾ ವ್ಯವಹಾರಗಳನ್ನು, ಸರ್ಕಾರ, ಸಚಿವರ ಸಹಬಾಗಿತ್ವವನ್ನು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿದಲ್ಲಿ ಮಾತ್ರ ಸತ್ಯ ಹೊರಬರಲು ಸಾಧ್ಯ.
ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಸ್ಯಾಂಟ್ರೊ ರವಿ ಕೊನೆಗೂ ಪೊಲೀಸ್ ಕೈವಶವಾಗಿದ್ದಾನೆ. ರಾಜ್ಯ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಆತ ಬಂಧಿತನಾಗಿದ್ದಾನೆ. ಅದರಲ್ಲೂ ಆತ ಕರ್ನಾಟಕದಿಂದ ಗುಜರಾತ್ ಗೆ ಇಷ್ಟೊಂದು ಬಿಗು ಕಣ್ಗಾವಲು ಇದ್ದಾಗಲೂ ಹೇಗೆ ಹೋದ ಎಂಬುದು ಇನ್ನೂ ತನಿಖೆಯಿಂದ ಗೊತ್ತಾಗಬೇಕು.
ಕಾರ್ಯಾಚರಣೆಯಲ್ಲಿ ಸ್ಯಾಂಟ್ರೋ ರವಿ ಬಂಧನವಾಗಿದೆ. ಕೆ. ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ, 11 ದಿನಗಳಿಂದ ತಲೆಮರೆಸಿಕೊಂಡಿದ್ದ.
ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಕಳೆದ 11 ದಿನಗಳಿಂದ ಪೊಲೀಸರಿಗೆ ಸಿಗದೆ ನಾಪತ್ತೆಯಾಗಿದ್ದ. ಈತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಇದೀಗ ಸ್ಯಾಂಟ್ರೋ ರವಿ ಬಂಧನದಿಂದ ಹಲವು ವಿಚಾರಗಳು ಹೊರಬೀಳುವ ಸಾಧ್ಯತೆ ಇದೆ.
ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರು ಗುಜರಾತ್‌ನಲ್ಲಿ ಇಂದು (ಜ.13, ಶುಕ್ರವಾರ) ಬಂಧಿಸಿದ್ದಾರೆ. ಯುವತಿಯೊಬ್ಬರಿಗೆ ಕೆಲಸ ನೀಡುವ ಭರವಸೆ ನೀಡಿ ಅವರನ್ನು ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸ್ವತಃ ಸಂತ್ರಸ್ತೆಯೇ ಆತನ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಿಸಿದ್ದರು. ಈ ವಿಚಾರವಾಗಿಯೂ ಪೊಲೀಸರು ಬಂಧಿತ ಆರೋಪಿಯ ವಿಚಾರಣೆ ನಡೆಸಲಿದ್ದಾರೆ.
ಸ್ಯಾಂಟ್ರೋ ರವಿ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಇಂದು ಸ್ಯಾಂಟ್ರೋ ರವಿ ಬಂಧನವಾಗಿರುವ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಯಾರ ಹೆಸರುಗಳು ಹೊರಗಡೆ ಬರುತ್ತವೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ.
ಇನ್ನು ರವಿಯನ್ನು ಗುಜರಾತ್‌ನ ಅಹಮ್ಮದಾಬಾದ್ ಸಮೀಪದ ಬಂಧಿಸಲಾಗಿದ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಎಡಿಜಿಪಿ ಅಲೋಕ್ ಕುಮಾರ್,. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ರವಿ ಎರಡನೇ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಮೈಸೂರು ಪೊಲೀಸರು ಬಂಧಿಸಿದ್ದಾರೆ. ರವಿ ತಲೆಮರೆಸಿಕೊಳ್ಳಲು ವಿಗ್ ಕಳಚಿದ್ದ. ಶೇವ್ ಮಾಡಿಕೊಂಡ ಇಂದು ಬೆಳಗ್ಗೆ ಮಹಾರಾಷ್ಟ್ರದಿಂದ ಗುಜರಾತ್ ಪ್ರವೇಶ ಮಾಡಿದ್ದ. ಈ ಕುರಿತು ಸುಳಿವು ಪಡೆದ ಮೈಸೂರು ಪೊಲೀಸರು, ಗುಜರಾತ್ ಪೊಲೀಸರ ನೆರವು ಪಡೆದು ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆ ಎಂದರು.