NEWS KARAVALI: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರಕ್ಕೆ ಬಳಸಿದ ವಾಹನವೀಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆಗೆ ಬಳಕೆ

NEWS KARAVALI: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರಕ್ಕೆ ಬಳಸಿದ ವಾಹನವೀಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆಗೆ ಬಳಕೆ

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜನವರಿ 14ರಿಂದ 26ರವರೆಗೆ 13 ದಿನಗಳ ಗ್ರಾಮ ವಿಕಾಸ ಯಾತ್ರೆ – ಗ್ರಾಮದೆಡೆಗೆ ಶಾಸಕರ ನಡಿಗೆ ಪರಿಕಲ್ಪನೆಯಡಿ ಪಾದಯಾತ್ರೆಯನ್ನು ಜ.14ರ ಮಧ್ಯಾಹ್ನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಆರಂಭಿಸಲಿದ್ದಾರೆ. ಈ ಸಂದರ್ಭ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಚುನಾವಣೆ ವೇಳೆ ಬಳಸಿದ ವಾಹನವನ್ನು ಬಹಿರಂಗ ಸಭೆಯಲ್ಲಿ ಬಳಸಲಿದ್ದಾರೆ.ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಪ್ರತಿದಿನ ಸರಾಸರಿ 30 ಕಿ.ಮೀ.ನಷ್ಟು ದೂರ ಕಾಲ್ನಡಿಗೆ ಕೈಗೊಳ್ಳಲಿರುವ ಶಾಸಕರು, ಜನರೊಂದಿಗೆ ಸಂವಾದ ನಡೆಸಲಿದ್ದಾರೆ . ಜನವರಿ 26ರಂದು ಬಿ.ಸಿ.ರೋಡ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುವ ನಿರೀಕ್ಷೆ ಇದೆ .

ಅಂಧ್ರಪ್ರದೇಶದಲ್ಲಿ ತಯಾರಾಗಿರುವ ವಿನೂತನ ಮಾದರಿಯ ಪ್ರಚಾರದ ಎಸ್ ಕ್ಯಾಬ್ ವಾಹನದಲ್ಲಿ ಪ್ರಧಾನಿ ನರೇಂದ್ರಮೋದಿ,ಗೃಹಸಚಿವ ಅಮಿತ್ ಶಾ,ಪಕ್ಷದ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ,ಸಿಎಂ ಬಸವರಾಜ್ ಬೊಮ್ಮಾಯಿ, ಅವರ ಸಹಿತ ರಾಜ್ಯ ಬಿಜೆಪಿ ನಾಯಕರ ಭಾವಚಿತ್ರವನ್ನು ಹೊಂದಿರುವ ತೆರದ ವಾಹನ ಇತ್ತೀಚೆಗೆ ಶಾಸಕರ ನಿವಾಸ ಒಡ್ಡೂರು ಫಾಮ್೯ ನಲ್ಲಿ ಸಹಕಾರಿ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
 
ಇತ್ತೀಚೆಗೆ ಗುಜರಾತಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರು‌ ಚುನಾವಣಾ ಪ್ರಚಾರ ಮತ್ತ ರೋಡ್ ಶೋ ವೇಳೇ ಇದೇವಾಹನವನ್ನು ಬಳಸಿದ್ದರೆಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ರಾತ್ರಿವೇಳೆ ನಡೆಯುವ ಬಹಿರಂಗಸಭೆಗೆ ಬೇಕಾದ ಪೋಕಸ್ ವಿದ್ಯುತ್ ,ಮೈಕ್ ,ಒಳಭಾಗದಲ್ಲಿ ಇಬ್ಬರಿಗೆ ಕುಳಿತುಕೊಳ್ಳಲು ಮತ್ತು ಹಿಂಬದಿಯಲ್ಲಿ ವೇದಿಕೆ ಮಾದರಿಯಲ್ಲಿದ್ದು ನಿಂತು ಭಾಷಣ ಮಾಡಲು ವ್ಯವಸ್ಥೆ ಈ ಎಸ್ ಕ್ಯಾಬ್ ವಾಹನದಲ್ಲಿದೆ.

 

 


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ