
Arrest: 'ನಾನು ಉಪರಾಷ್ಟ್ರಪತಿ ಮೆಸೇಜ್ ಮಾಡ್ತಿದ್ದೇನೆ' - ಮೆಸೇಜ್ ಕಳಿಸಿ ಬೇಸ್ತು ಬೀಳಿಸಿದ ಇಟಲಿಯ ವ್ಯಕ್ತಿ!!
ನಾನು
ಉಪರಾಷ್ಟ್ರಪತಿ ಜಗದೀಪ್ ಧನ್ ಕರ್. ಹೀಗೆಂದು ಅಧಿಕಾರಿಗಳು, ಜನರನ್ನು ನಂಬಿಸಿ ಬೇಸ್ತುಬೀಳಿಸಿದ
ವ್ಯಕ್ತಿಯೀಗ ಪೊಲೀಸರ ವಶದಲ್ಲಿದ್ದಾನೆ. ಈತ ಇಟಲಿಯಿಂದಲೇ ಭಾರತದ ಅಧಿಕಾರಿಗಳಿಗೆ ಮೆಸೇಜ್ ಮಾಡಿ ಉಪರಾಷ್ಟ್ರಪತಿ ಹೆಸರಲ್ಲಿ ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದನಂತೆ!!
ವಾಟ್ಸಾಪ್ ಮೂಲಕ ಈತ ಅಧಿಕಾರಿಗಳಿಗೆ ಸಂದೇಶ ಕಳಿಸಿ, ಕೆಲಸ ಮಾಡಿಕೊಡಲು ಸೂಚಿಸುತ್ತಿದ್ದ ಈ ವ್ಯಕ್ತಿಯ ಹೆಸರು ಗಗನ್ ದೀಪ್ ಸಿಂಗ್. ಜಮ್ಮು ಕಾಶ್ಮೀರ ಈತನ ಮೂಲವಾದರೂ 2007ರಿಂದ ಇಟಲಿಯ ಅಫನೆಂಗೊ ಎಂಬಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಕಂಪನಿಯೊಂದರಲ್ಲಿ ಆತ ಕಾರ್ಮಿಕನಾಗಿದ್ದ.
ಯೂಟ್ಯೂಬ್ ವಿಡಿಯೋ ನೋಡಿ, ಜಗದೀಪ್ ಧನ್ ಕರ್ ಅವರ ಫೊಟೋ ಇರುವ ನಕಲಿ ವಾಟ್ಸಾಪ್ ಸಂಖ್ಯೆಯ ಮೂಲಕ ಜನರಿಗೆ ಅಧಿಕಾರಿಗಳಿಗೆ ಸಂದೇಶ ಕಳುಹಿಸುತ್ತಿದ್ದ. ತನಗೆ ಬೇಕಾದಂತೆ ನಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದ. ಇದಕ್ಕೆ ಅಶ್ವನಿಕುಮಾರ್ ಎಂಬಾತ ಸಾಥ್ ನೀಡಿದ್ದ. ಅಧಿಕಾರಿಗಳು ನೇರವಾಗಿ ಉಪರಾಷ್ಟ್ರಪತಿಯಿಂದ ಸಂದೇಶ ಏಕೆ ಬಂದಿದೆ ಎಂಬುದನ್ನು ಪರಾಮರ್ಶಿಸಲು ತೊಡಗಿದಾಗ ಪ್ರಕರಣ ಬಯಲಿಗೆ ಬಂತು.