MODI SPEECH: 2004-2014 ಹತ್ತು ವರ್ಷಗಳು ಹೇಗಿತ್ತು? ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದು ಹೀಗೆ

MODI SPEECH: 2004-2014 ಹತ್ತು ವರ್ಷಗಳು ಹೇಗಿತ್ತು? ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದು ಹೀಗೆ

 


ಕೇಂದ್ರ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದಲ್ಲಿ ಪಾಲ್ಗೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಾತನಾಡಿದ್ದು, ಈ ಸಂದರ್ಭ 2004ರಿಂದ 2014ರವರೆಗಿನ ಯುಪಿಎ ಸರಕಾರ ಅವಧಿಯಲ್ಲಿ ದೇಶ ಹಿಂದೆ ಹೋಗಿತ್ತು, ಹದಗೆಟ್ಟಿತ್ತು. ಆರ್ಥಿಕ ದುರುಪಯೋಗದ ಕಾಲವಾಗಿತ್ತು ಎಂದು ಟೀಕಿಸಿದರು.

ದೇಶ ಭ್ರಷ್ಟಾಚಾರದಿಂದ ಮುಕ್ತವಾಗಿದೆ. ದೇಶದಲ್ಲಿ ಕುಟುಂಬ ರಾಜಕಾರಣ ಭ್ರಷ್ಟಾಚಾರ ಅಂತ್ಯವಾಗಿದೆ.  ವಿಶ್ವದ ಸಮೃದ್ಧ ದೇಶಗಳಲ್ಲಿ ಭಾರತ ಒಂದಾಗಿದೆ. ಈ ಬಾರಿ ಭಾರತಕ್ಕೆ ಜಿ-20  ಅಧ್ಯಕ್ಷತೆ ಸಿಕ್ಕಿರುವುದರಿಂದ ಕೆಲವರಿಗೆ ದುಃಖವಾಗುತ್ತಿರಬಹುದು. ಭಾರತ ವಿಶ್ವದಲ್ಲೇ ಸಮೃದ್ಧಯ ದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ನಮಗೆ ಜಿ-20 ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇದು ದೇಶದ ಜನತೆಗೆ ಸಿಕ್ಕ ಗೌರವ ಆದರೆ ಇದು ಸಿಕ್ಕಿರುವುದು ಕೆಲವರಿಗೆ ದುಃಖವಾಗಿದೆ. ಯಾರಿಗೆ ದುಃಖವಾಗಿದೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.ಕೆಲವರು ದೇಶದ ಪ್ರಗತಿಯನ್ನ ಸ್ವೀಕಾರ ಮಾಡುವುದಿಲ್ಲ 140 ಕೋಟಿ ಜನರಿಗೆ ಏನು ಸಿಕ್ಕಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಲ್ಲ. ಇಡೀ ಭಾರತ ಕನಸು ನನಸಾಗಲು ಸಂಕಲ್ಪ ತೊಟ್ಟಾಗಿದೆ. ಈ ರೀತಿಯ ನಿರಾಶೆಯ ಹಿಂದೆ ಬೇರೆಯೇ ರೀತಿಯ ಲೆಕ್ಕಾಚಾರವಿದೆ  ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಬಂದೂಕು ಪರವಾನಗಿ ಕತೆ:

ಯುವಕರಿಬ್ಬರು ಬೇಟೆ ಆಡಲು ಕಾಡಿಗೆ ಹೊರಟರು. ಇಬ್ಬರೂ ಕಾಡಿನಲ್ಲಿ ಓಡಾಟ ನಡೆಸಿದರು. ಬೇಟೆಗಾಗಿ ಬಂದವರು ತಮ್ಮೊಂದಿಗೆ ತಂದಿದ್ದ ಬಂದೂಕುಗಳನ್ನು ವಾಹನಗಳಲ್ಲಿಯೇ ಇಟ್ಟು ತಿರುಗಾಡಿದರು. ಅದೇ ಸಮಯದಲ್ಲಿ ಅವರ ಎದುರು ಹುಲಿ ಪ್ರತ್ಯಕ್ಷವಾಯಿತು. ತಕ್ಷಣ ಅವರು ಏನು ಮಾಡಿದರು? ತಮ್ಮಲ್ಲಿದ್ದ ಬಂದೂಕಿನ ಪರವಾನಗಿ ಪತ್ರವನ್ನು ತೆಗೆದು ಹುಲಿಯ ಮುಂದಿಟ್ಟು, ನಮ್ಮ ಬಳಿ ಬಂದೂಕಿನ ಪರವಾನಗಿ ಇದೆ ಎಂದರು.
ಪ್ರಧಾನಿ ಮೋದಿ ಹೇಳಿದ ಈ ಕಥೆಗೆ ಲೋಕಸಭೆಯು ನಗೆಗಡಲಲ್ಲಿ ತೇಲಿತು. ಇದೇ ಕಥೆಯನ್ನು ಆಧರಿಸಿ, ವಿರೋಧ ಪಕ್ಷದವರೂ ನಿರುದ್ಯೋಗ ಶಮನಕ್ಕಾಗಿ ಕಾನೂನುಗಳನ್ನು ಮಾಡಿರುವುದಾಗಿ ಜನರ ಮುಂದಿಟ್ಟರು  ಎಂದು ಕಾಂಗ್ರೆಸ್ ಅವಧಿಯ ಜಾರಿಗೆ ತಂದ ಕಾನೂನುಗಳ ಬಗ್ಗೆ ಟೀಕಿಸಿದರು.

ಭಯೋತ್ಪಾದಕರ ಧೈರ್ಯ ಹೆಚ್ಚಿಸಿದರು:
ತಂತ್ರಜ್ಞಾನ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದರೂ ಅವರು 2ಜಿಯಲ್ಲೇ ಸಿಲುಕಿದ್ದರು. 2010ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮೂಲಕ ಭಾರತದ ಯುವ ಶಕ್ತಿಯ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿತ್ತು. ಆದರೆ, ಕಲ್ಲಿದ್ದಲು ಹಗರಣ ಹೊರಬಂದಿತು. 2008ರ ಮುಂಬೈ ದಾಳಿಯನ್ನು ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಆದರೆ, ಅವರಿಗೆ ಭಯೋತ್ಪಾದನೆಯ ವಿರುದ್ಧ ಹೋರಾಡಲು ಧೈರ್ಯ ಇರಲಿಲ್ಲ, ಅದರಿಂದಾಗಿ ಭಯೋತ್ಪಾದಕರಲ್ಲಿ ಧೈರ್ಯ ಹೆಚ್ಚಿತು ಎಂದರು.

ಕಾಶ್ಮೀರಕ್ಕೆ ಹೋದವರಿಗೆ ಗೊತ್ತಾಗಿರಬಹುದು:
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಹೇಗೆ ಓಡಾಡಬಹುದು ಎಂಬುದನ್ನು ಇತ್ತೀಚೆಗೆ ಅಲ್ಲಿಂದ ಬಂದಿರುವವರು ಕಂಡಿರಬಹುದು' ಎನ್ನುವ ಮೂಲಕ ಕಾಂಗ್ರೆಸ್ಸಿಗರಿಗೆ ಪ್ರಧಾನಿ ಮೋದಿ ಬದಲಾಗಿರುವ ಕಾಶ್ಮೀರದ ಸ್ಥಿತಿಯ ಬಗ್ಗೆ ತಿಳಿಸಿದರು.  ಜನವರಿ 26ರಂದು ಬೆಳಿಗ್ಗೆ ಸರಿಯಾಗಿ 11ಕ್ಕೆ ನಾನು ಲಾಲ್ ಚೌಕಕ್ಕೆ ಭದ್ರತೆ ಇಲ್ಲದೆಯೇ ಹಾಗೂ ಬುಲೆಟ್ಪ್ರೂಫ್ ಜಾಕೆಟ್ ಹಾಕದೆ ಬರುವೆ. ಯಾರು ತನ್ನ ತಾಯಿಯ ಎದೆ ಹಾಲು ಕುಡಿದು ಬೆಳೆದಿರುವವರು ಎಂಬುದು ಅಲ್ಲಿ ನಿರ್ಣಯವಾಗುತ್ತದೆ.' ಅದರಂತೆ ಲಾಲ್ ಚೌಕದಲ್ಲಿ ನಾನು ತಿರಂಗವನ್ನು ಹಾರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.


 

 

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ