CRIME: ಐದು ವರ್ಷದ ಬಾಲಕಿಯ ರೇಪ್, ಮರ್ಡರ್: ಆರೋಪಿಗೆ ಮರಣದಂಡನೆ ವಿಧಿಸಿದ ಕೋರ್ಟು
Saturday, February 4, 2023
ಗಾಜಿಯಾಬಾದ್ ನ ಸಾಹಿಬಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಐದು ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರವೆಸಗಿ ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿಗೆ ಶುಕ್ರವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಗಾಜಿಯಾಬಾದ್ ಪೊಕ್ಸೊ ನ್ಯಾಯಾಲಯ ಈ ತೀರ್ಪು ನೀಡಿದ್ದು, ಘಟನೆ ನಡೆದ ಎರಡು ತಿಂಗಳಲ್ಲೇ ಶಿಕ್ಷೆ ವಿಧಿಸಿದಂತಾಗಿದೆ.
ಡಿ.1ರಂದು ಗಾಜಿಯಾಬಾದ್ ನ ಸಾಹಿಬಾಬಾದ್ ನಲ್ಲಿ 5 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು ಪೋಷಕರು ಸತತ ಹುಡುಕಾಟ ನಡೆಸಿದ ಬಳಿಕ ಶವ ಡಿ.2ರಂದು ಸಮೀಪದ ಕಾಡಿನಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಈ ವೇಳೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿಯನ್ನು 200ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿ ಸೋನು ಎಂಬಾತನನ್ನು ಬಂಧಿಸಲಾಗಿತ್ತು.