POLITICS: ನಾಳೆ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ : ಎಚ್.ಡಿ.ಕುಮಾರಸ್ವಾಮಿ
Friday, March 31, 2023
ಚುನಾವಣೆ ಘೋಷಣೆಗೂ ಮುನ್ನವೇ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿ ಹೊಸ ಟ್ರೆಂಡ್ ಅನ್ನು ಕಾಂಗ್ರೆಸ್ ಪಕ್ಷ ಸೃಷ್ಟಿಸಿರುವಂತೆಯೇ ಜೆಡಿಎಸ್ ಕೂಡ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿಯನ್ನು ನಾಳೆ ಅಂದರೆ ಏಪ್ರಿಲ್ 1ರಂದು ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಾಳೆಯಿಂದ ಚಾಮರಾಜನಗರ, ಮೈಸೂರು, ಬಳ್ಳಾರಿ , ಹುಬ್ಬಳ್ಳಿ, ಧಾರವಾಡದಲ್ಲಿ 12 ನೇ ತಾರೀಖಿನ ವರೆಗೂ ಪ್ರಚಾರ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಏಪ್ರಿಲ್ 13 ರಿಂದ 20 ರ ವರೆಗೆ ಅಭ್ಯರ್ಥಿಗಳ ಜೊತೆ ನಾಮಪತ್ರ ಸಲ್ಲಿಕೆಗೊ ತೆರಳುತ್ತೇನೆ. 21 ರಿಂದ 24 ವರೆಗೂ ರಾಮನಗರ, ಚನ್ನಪಟ್ಟಣದಲ್ಲಿ ಕನಕಪುರ,ಪ್ರಚಾರ ಮಾಡುತ್ತೇನೆ. 25 ರಿಂದ ಮಾರ್ಚ್ 8 ವರೆಗೂ ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಈ ಮೂಲಕ ಜೆಡಿಎಸ್ ಪರ ಅಭೂತಪೂರ್ವ ಬೆಂಬಲ ಸಿಗುವಂತೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.