Water: ಮಡಿಕೆ ನೀರಿನ ಮಹತ್ವ ಪುಣ್ಯ ನದಿಗಳ ಹೆಸರು...!!
ಪೆರ್ನಾಜೆ ಪೋಸ್ಟ್ ಕಾವು ವಯ ದ.ಕ 574223
ಮೋ:9480240643
ಜೀವನದಲ್ಲಿ ಒಂದೊಂದು ಘಟನೆಗಳು ಒಂದೊಂದು ಪಾಠವನ್ನು ಕಲಿಸುತ್ತದೆ. ಗಡಿನಾಡ ದ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಡಳಿತ ವ್ಯವಸ್ಥೆಯು ಸದಾ ಚಿತ್ತ ಹರಿಸಲು ಮತ್ತು ವಿಶ್ವದೆಲ್ಲೆಡೆ ಗಡಿನಾಡ ಕನ್ನಡ ಸಮ್ಮೇಳನಗಳು ಮಹತ್ವ ಪಡೆದಿದೆ ಎಂಬ ಸದಾಶಯದ ನುಡಿಗಳು ಪಾಣಜೆ ಓಡ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ವ್ಯಕ್ತಗೊಂಡವು
ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲ್ಲಿನ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವಿದ್ಯಾರ್ಥಿಗಳಿಂದ ಸಭಾಂಗಣದ ಮುಂಭಾಗದಲ್ಲಿ ಮೇಜಿನ ಮೇಲೆ ಬೈ ಹುಲ್ಲಿನ ಚೆರುವಿನ ಮೇಲೆ ಮಡಿಕೆ ಉರಳಿ ಬೀಳದಂತೆ ಎಚ್ಚರವಹಿಸಿ ಮಡಿಕೆಗಳನ್ನು ಒಂದೊಂದು ಮಡಿಕೆಗೂ ಒಂದೊಂದು ಹೆಸರು ತಪತಿ ,ಕಾವೇರಿ, ನೇತ್ರಾವತಿ, ಗೋದಾವರಿ ಎಂಬ ವಿಶೇಷ ನದಿಗಳ ಹೆಸರನ್ನು ಬಿಂಬಿಸಿ ಮೇಲ್ಭಾಗಕ್ಕೆ ಬಟ್ಟಲು ಗ್ಲಾಸ್ ಮುಚ್ಚಿಟ್ಟು ಕನ್ನಡಿ ಸ್ವಚ್ಛವಾಗಿದ್ದರೆ ಅದರ ಪ್ರತಿಬಿಂಬ ಸುಂದರವಾಗಿ ಕಾಣುತ್ತದೆ ಅದೇ ರೀತಿ ಮನಸ್ಸು ಸ್ವಚ್ಛವಾಗಿದ್ದರೆ ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ .
ನೀರು ಶುಭ್ರವಾಗಿದ್ದಾಗ ಪ್ರತಿಬಿಂಬ ಸುಂದರ ಹಾಗೆ ಮನಸ್ಸು ಪರಿಶುದ್ಧವಾಗಿದ್ದಾಗ ಇತರರು ಪರಿಪೂರ್ಣವಾಗಿ ಕಾಣುತ್ತಾರೆ ಹನಿ ಹನಿ ನೀರು ಅಮೂಲ್ಯ ಒಂದೊಂದು ಹನಿಯಾಗಿ ನೀರು ಬೀಳುತ್ತಿದ್ದರು ಒಂದಾನೊಂದು ಕಾಲಕ್ಕೆ ಗಡಿಗೆಯ ತುಂಬಾ ನೀರು ತುಂಬಿಕೊಳ್ಳುತ್ತದೆ.