
KARNATAKA: ಜೋಡೆತ್ತಿನಂತೆ ಜತೆಯಾಗಿ ಹೊರಟವರ ಮುಂದೆ ಆಶ್ವಾಸನೆ ಈಡೇರಿಕೆಯೇ ದೊಡ್ಡ ಸವಾಲ್!!
![]() | ||
ಕಡತಚಿತ್ರ |
ಇಂಥ ಹೊತ್ತಿನಲ್ಲೇ ಬೆಂಗಳೂರಿನಲ್ಲಿ ಮಳೆ ಬಂತು. ಎಲ್ಲ ಕಡೆಗಳಲ್ಲೂ ಮಳೆಯಾಗುವಂತೆ ಬೆಂಗಳೂರಲ್ಲೂ ಬಂತು. ಆದರೆ ನೀರು ಹೋಗಬೇಕಾದ ಜಾಗದಲ್ಲಿ ಕಾಂಕ್ರೀಟ್ ಚಪ್ಪಡಿಗಳು, ರಸ್ತೆಗಳು, ಮುಚ್ಚಿದ ಚರಂಡಿಗಳು, ಭರ್ತಿಯಾಗದ ಹೊಂಡಗಳು ಇದ್ದ ಕಾರಣ ಬೆಂಗಳೂರು ಮತ್ತೊಮ್ಮೆ ಬಟಾಬಯಲಾಯಿತು. ಕಾರೊಂದು ಚಾಲಕನ ಅರಿವಿಗೆ ಬಾರದೆ ಹೊಂಡಕ್ಕೆ ಬಿದ್ದು, ಅದರಲ್ಲಿದ್ದ ಯುವತಿಯೊಬ್ಬಳು ಸಾವನ್ನಪ್ಪಿದರೆ, ಕಾರು ಚಾಲಕನನ್ನೇ ಹೊಣೆಗಾರನನ್ನಾಗಿ ಮಾಡಿ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡಲಾಯಿತು.
ಅಂತೂ ಇಂತೂ ಎಂಟರ ಬಂಟರೊಂದಿಗೆ ಜೋಡೆತ್ತುಗಳು ಎಂದೇ ಹೇಳಲಾಗುವ ಸಿದ್ದು,ಡಿಕೆಶಿ ದರ್ಬಾರು ಹೀಗೆ ಶುರುವಾಗಿದೆ. ವಿಧಾನಮಂಡಳದ ಮೊದಲ ದಿನ ಹಾಗೂ ಹೀಗೂ ಮುಗಿದಿದೆ. ಸವಾಲುಗಳು ಸಾಕಷ್ಟಿವೆ. ಚುನಾವಣೆಗೆ ಮೊದಲು ಆವೇಶದಲ್ಲಿ ಏನೇನು ಹೇಳಿದ್ದಾರೋ ಅದನ್ನೆಲ್ಲಾ ಜನ ನೆನಪಿಟ್ಟುಕೊಳ್ತಾರೆ. ಅವರು ಮರೆತರೆ, ಸೋಶಿಯಲ್ ಮೀಡಿಯಾಗಳು ಈಗ ಜಾಗೃತವಾಗಿವೆ. ನೀವು ಹೇಳಿದ್ದೆಲ್ಲವೂ ದಾಖಲಾಗಿವೆ. ವಿಡಿಯೋಗಳು ಹೊರಬರುತ್ತವೆ. ನನಗೂ ಸಿಗುತ್ತೆ, ನಿಮಗೂ ಸಿಗುತ್ತೆ ಎಂದು ಕಡೆಗೆ ಷರತ್ತುಗಳನ್ನು ಹಾಕಿದ್ರೆ ನೀವೂ ವಚನಭ್ರಷ್ಟರಾಗ್ತೀರಿ ಎಂದು ಬಿಜೆಪಿಯೂ ಟೀಕೆಗೆ ಸಿದ್ಧವಾಗಿ ಕುಳಿತಿದೆ. ಹೈಕಮಾಂಡ್ ನ ಪ್ರಶ್ನಾತೀತ ನಾಯಕರು ರಾಜ್ಯಕ್ಕೆ ಬಂದು ಭಾಷಣಗಳಲ್ಲಿ ಹೇಳಿದ ಗ್ಯಾರಂಟಿಗಳನ್ನು ಜಾರಿಗೆ ತರುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಎಂಟರೊಂದಿಗೆ ಎರಡು ಮಹಾನಾಯಕರು ಮುಳುಗಿದ್ದಾರೆ. ಮುಂದೇನಾಗುತ್ತೆ? ಕಾದು ನೋಡೋಣ.