
CRIME: ಚಾಕೊಲೇಟ್ ಗೆ ಮಾದಕದ್ರವ್ಯ ಲೇಪಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ: ಮಂಗಳೂರಲ್ಲಿ 100 ಕೆಜಿ ಚಾಕೊಲೇಟ್ ವಶಕ್ಕೆ ಪಡೆದ ಸಿಟಿ ಪೊಲೀಸರು
Thursday, July 20, 2023
ಮಂಗಳೂರು ಸಿಟಿ ಪೊಲೀಸರು ಡ್ರಗ್ಸ್ ಬೇಟೆ ಮುಂದುವರಿಸಿದ್ದಾರೆ. ಶಾಲೆ ಕಾಲೇಜು ಮಕ್ಕಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಚಟ ಅಂಟಿಸುವ ಡೇಂಜರ್ ಜಾಲವೊಂದರ ಸುಳಿವು ಪೊಲೀಸರಿಗೆ ದೊರೆತಿದೆ. 100 ಕೆಜಿಯಷ್ಟು ಚಾಕೊಲೇಟ್ ವಶಪಡಿಸಿರುವ ಪೊಲೀಸರು ಅಲ್ಲಿ ಡ್ರಗ್ಸ್ ಲೇಪನವಿರುವುದನ್ನು ಪತ್ತೆಹಚ್ಚಿದ್ದಾರೆ. ಖಚಿತತೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಮಂಗಳೂರಿನ ಪಾಂಡೇಶ್ವರ ಪೊಲೀಸರು ಬುಧವಾರ ನಗರದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಈ ಅಂಗಡಿಗಳಿಂದ ಬ್ಯಾಂಗ್ ಚಾಕೊಲೇಟ್ ಎಂದು ಲೇಬಲ್ ಮಾಡಿದ 100 ಕೆಜಿ ಮಾದಕವಸ್ತು ಮಿಶ್ರಿತ ಚಾಕೊಲೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮನೋಹರ್ ಮತ್ತು ಬೆಚ್ಚನ್ ಸೋಂಕರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.