HIKE IN MILK PRICE: ನಂದಿನಿ ಹಾಲಿನ ದರ 3 ರೂ ಹೆಚ್ಚಳ: ಯಾವ್ಯಾವುದಕ್ಕೆ ಎಷ್ಟೆಷ್ಟು? ಕ್ಲಿಕ್ ಮಾಡಿರಿ
Friday, July 21, 2023
ಬೆಂಗಳೂರು: ಪ್ರಸ್ತುತ
ಸನ್ನಿವೇಶದಲ್ಲಿ ಹಾಲು ಉತ್ಪಾದಕರ ಹಿತ ಕಾಯುವುದಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯ. ಕರ್ನಾಟಕದಲ್ಲಿ
ಅತಿ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡುತ್ತಿದ್ದೇವೆ. ಹಾಲು ಉತ್ಪಾದಕರಿಂದ ಹಾಲು ಖರೀದಿ ಮಾಡುವ ದರವೂ
ಕಡಿಮೆ ಇದೆ. ರೈತರಿಗೆ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಹೀಗೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ
ಕೆಎಂಎಫ್ ಅಧಿಕಾರಿಗಳು, ಆಡಳಿತ ಮಂಡಳಿ ಜತೆಗಿನ ಸಭೆಯ ಬಳಿಕ ವಿವರಿಸುವುದರೊಂದಿಗೆ ನಂದಿನಿ ಹಾಲಿನ
ಬೆಲೆ 3 ರೂ ಏರಿಕೆಯಾಗಿದೆ ಎಂದು ಪ್ರಕಟಿಸಿದರು.
ನಂದಿನ ಹಾಲಿನ ದರ ಏರಿಕೆ ಪ್ರತಿ ಲೀಟರಿಗೆ 5 ರೂಪಾಯಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಚರ್ಚೆಗೆ ಒಳಗಾಗಿದ್ದು, ಕೊನೆಗೆ 3 ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದೆ. ಟೋನ್ಡ್ ಹಾಲಿಗೆ 42 ರೂ, ಹೊಮೊಜಿನೈಸ್ಡ್
ಟೋನ್ಡ್ ಹಾಲಿಗೆ 43, ಸ್ಪೆಶಲ್ ಹಾಲಿಗೆ 48 ರೂ ಆಗಲಿದೆ. ಹೊಮೊಜಿನೈಸ್ಡ್ ಸ್ಟಾಂಡಡೈಸಡ್ ಹಾಲಿಗೆ
49, ಸಂತೃಪ್ತಿ ಹಾಲಿಗೆ 55 ರೂ, ಡಬಲ್ ಟೋನ್ಡ್ ಹಾಲಿಗೆ41ರೂ ಆಗಲಿದೆ.