Udupi Rain: ಉಡುಪಿ ಜಿಲ್ಲೆಯಲ್ಲಿ ಮಳೆ, ತಗ್ಗು ಪ್ರದೇಶ ಜಲಾವೃತ
Thursday, July 6, 2023
ಉಡುಪಿ ಮಳೆ
ಉಡುಪಿಯಲ್ಲಿ ಇಂದು ಮಳೆ ಧಾರಾಕಾರವಾಗಿ ಸುರಿದ ಪರಿಣಾಮ, ಶ್ರೀಕೃಷ್ಣ ಮಠದ ಆವರಣದಲ್ಲಿ ನೀರು ತುಂಬಿತು. ಉಡುಪಿಯ ಸುತ್ತಮುತ್ತಲಿರುವ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನರು ಪರದಾಡಬೇಕಾಯಿತು. ವಿಪತ್ತು ನಿರ್ವಹಣಾ ತಂಡದವರು ಸಾರ್ವಜನಿಕರಿಗೆ ನೆರವು ನೀಡಲು ಧಾವಿಸಿದರು. ಇಡೀ ದಿನ ಸುರಿದ ಮಳೆಗೆ ಸರಿಯಾಗಿ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದೆ ಈ ಸಮಸ್ಯೆ ತಲೆದೋರಿತು. ಉಡುಪಿಗೆ ವಿವಿಧೆಡೆಗಳಿಂದ ಬಂದ ಭಕ್ತರೂ ಇದರಿಂದ ತೊಂದರೆಗೆ ಒಳಗಾದರು.